ಕಾವೇರಿಪುರ ವಾರ್ಡ್ನ ಅಭಿವೃದ್ಧಿ ಕಾಮಗಾರಿ ಕುಂಠಿತ

ಬೆಂಗಳೂರು, ಜ.12- ಉಪಮೇಯರ್ ರಮಿಳಾ ಉಮಾಶಂಕರ್ ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಗೋಳು ಕೇಳೋರು ಯಾರೂ ಇಲ್ಲ. ಅವರ ನಿಧನದ ನಂತರ ಕಾವೇರಿಪುರ ವಾರ್ಡ್‍ನ ಸಮಸ್ಯೆಗಳು ದ್ವಿಗುಣಗೊಂಡಿವೆ.

ಅಳವಡಿಸಲಾದ ನೂರು ಸಿಸಿ ಕ್ಯಾಮೆರಾಗಳಿಗೆ ಇದುವರೆಗೂ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ವಾರ್ಡ್‍ನಲ್ಲಿ ಅಪಘಾತ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.

ಇತ್ತೀಚೆಗೆ ಪಟ್ಟೇಗಾರ್ ಪಾಳ್ಯ ಮತ್ತು ಕಾವೇರಿಪುರದಲ್ಲಿರುವ ದೇವಸ್ಥಾನಗಳ ಹುಂಡಿ ಕಳವು ಮಾಡಲಾಗಿತ್ತು.ಅದೇ ರೀತಿ ಹಲವಾರು ಅಪಘಾತ ಪ್ರಕರಣಗಳು ಜರುಗಿದ್ದವು.

ಒಟ್ಟಾರೆ ವಾರ್ಡ್‍ನಲ್ಲಿ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಬೇಕಾದರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಿಸಿ ಕ್ಯಾಮೆರಾಗಳಿಗೆ ಸಂಪರ್ಕ ಕಲ್ಪಿಸಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ರಮಿಳಾ ಅವರ ನಿಧನದ ನಂತರ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಶಾಸಕರು ಕಾವೇರಿಪುರ ವಾರ್ಡ್‍ನ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ