ವರ್ಮಾಗಿಂತ ರಾಹುಲ್ ಗಾಂಧಿಯೇ ಹೆಚ್ಚು ಅಳುತ್ತಿದ್ದಾರೆ: ಇಜೆಪಿ ಲೇವಡಿ

ನವದೆಹಲಿ: ಸಿಬಿಐ ನಿರ್ದೇಶಕ ಹುದ್ದೆಯಿಂದ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿ, ಅಗ್ನಿಶಾಮಕ ದಳದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಅಲೋಕ್ ವರ್ಮಾ ಅವರಿಗಿಂತಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೆಚ್ಚು ಅಳುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಅವರು ಅಲೋಕ್ ವರ್ಮಾ ಅವರ ದುರ್ದೆಶೆಗಾಗಿ ರಾಹುಲ್ ಗಾಂಧಿ ಹೆಚ್ಚು ಅಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಿಂದಿನ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್ ಸಿಬಿಐ ವ್ಯವಹಾರದಲ್ಲಿ ಪದೇಪದೇ ಹಸ್ತಕ್ಷೇಪ ನಡೆಸುತ್ತಿತ್ತು; ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಮತ್ತು ಇತರ ರಕ್ಷಣಾ ಪರಿಕರ ಖರೀದಿ ವ್ಯವಹಾರಗಳಲ್ಲಿ ಸಿಬಿಐ ಯಾವೆಲ್ಲ ಸತ್ಯಾಂಶಗಳನ್ನು ಕಲೆ ಹಾಕುತ್ತಿದೆ ಎಂಬುದನ್ನು ತಿಳಿಯಲು ಕಾಂಗ್ರೆಸ್ ಯತ್ನಿಸುತ್ತಿತ್ತು ಎಂದು ನರಸಿಂಹ ರಾವ್ ಹೇಳಿದ್ದಾರೆ.

ಕಾಂಗ್ರೆಸ್ಗೆ ಸಿಬಿಐ ಬಗ್ಗೆ ಅತೀವವಾದ ಭಯ ಇತ್ತು. ಸಿಬಿಐಗೆ ರಕ್ಷಣಾ ‘ಡೀಲ್’ (ಭ್ರಷ್ಟಾಚಾರ) ಗಳ ನಿಜಾಂಶಗಳು ದೊರಕುವವೋ ಎಂಬ ಬಗ್ಗೆ ಕಾಂಗ್ರೆಸ್ ಗೆ ಆತಂಕವಿತ್ತು. ಆದುದರಿಂದಲೇ ಅದು ಸಿಬಿಐ ಚರ್ಚೆಯಲ್ಲಿ ಪದೇ ಪದೇ ಹಸ್ತಕ್ಷೇಪ ನಡೆಸಿ ಸಿಬಿಐ ಯಾವೆಲ್ಲ ನಿಜಾಂಶಗಳನ್ನು ಕಲೆ ಹಾಕಿದೆ ಎಂಬುದನ್ನು ಕೆದಕಿ ನೋಡುತ್ತಿತ್ತು ಎಂದು ರಾವ್ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ