ವಿಶ್ವ ಪಾರಂಪಾರಿಕ ತಾಣ ಹೆಗ್ಗಳಿಕೆ ಪಡೆದಿರುವ ಹಂಪಿಗೆ ಮತ್ತೊಂದು ಗರಿ

ನ್ಯೂಯಾರ್ಕ್, ಜ.11 – ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣವೆಂದು ಹೆಗ್ಗಳಿಕೆ ಪಡೆದಿರುವ ಕರನಾಟಕದ ಹಂಪಿ ಕೀರ್ತಿಯ ಮುಕುಟಕ್ಕೆ ಈಗ ಮತ್ತೊಂದು ಗರಿ ಲಭಿಸಿದ್ದು, ನ್ಯೂಯಾರ್ಕ್ ಟೈಮ್ಸ್(ಎನ್‍ವೈಟಿ) ದಿನಪತ್ರಿಕೆ ಪಟ್ಟಿ ಮಾಡಿರುವ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣದಲ್ಲಿ ಹಂಪಿ ಎರಡನೆ ಸ್ಥಾನಪಡೆದುಕೊಂಡಿದೆ.
ಎನ್‍ವೈಟಿ ಪ್ರಕಟಿಸಿರುವ 2019ರಲ್ಲಿ ನೋಡಲೇಬೇಕಾದ ಜಗತ್ತಿನ ಟಾಪ್-5 ಪ್ರವಾಸಿ ತಾಣಗಳಲ್ಲಿ ಬಳ್ಳಾರಿ ಜಿಲ್ಲೆಯ ಹಂಪಿ ಎರಡನೇ ಸ್ಥಾನದಲ್ಲಿದೆ. ಹಂಪಿ ಹೊರತುಪಡಿಸಿ ಭಾರತದ ಇನ್ನಾವುದೇ ಪ್ರವಾಸಿ ಅಥವಾ ಸುಂದರ ತಾಣಗಳು ಸ್ಥಾನಪಡೆದಿಲ್ಲ.

ಪ್ಯೂರ್ಟೊರಿಕೋದ ನಿಸರ್ಗ ಸೊಬಗಿನ ರುದ್ರ ರಮಣೀಯ ಕೆರಿಬಿಯನ್ ದ್ವೀಪ ಅಗ್ರಸ್ಥಾನದಲ್ಲಿದ್ದರೆ. ಹಂಪಿ, ಸಾಂತಾ ಬಾರ್ಬರಾ (ಅಮೆರಿಕದ ಕ್ಯಾಲಿಪೋರ್ನಿಯಾ), ಪನಾಮ ಮತ್ತು ಮ್ಯೂನಿಚ್(ಜರ್ಮನಿ) ಕ್ರಮವಾಗಿ ನಂತರದ ಸ್ಥಾನಗಳಲ್ಲಿದೆ.

16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಪ್ರಾಚೀನ ದೇಗುಲಗಳು, ಕಲ್ಲಿನ ರಥ, ಶಿಲ್ಪ ಕಲೆಗಳ ತಾಣವಾಗಿರುವ ಹಂಪಿಗೆ ವಿಶ್ವದ ವಿವಿಧ ದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡುತ್ತಾರೆ.

ಸಮೃದ್ಧ ಸಂಸ್ಕøತಿಯ ತಾಣವಾದ ಹಂಪಿಗೆ 2016-17ರಲ್ಲಿ 5.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು.ಇವರಲ್ಲಿ 38,000ಕ್ಕೂ ಅಧಿಕ ಮಂದಿ ವಿದೇಶಿಯರೇ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ