ಸಾರಿಗೆ ಸಂಸ್ಥೆಯ ಬೆಳವಣಿಗೆಗೆ ಮತ್ತು ಸದೃಡತೆಗೆ ಸಿಐಆರ್ಟಿ ಪಾತ್ರ ಪ್ರಮುಖವಾದದ್ದು

ಬೆಂಗಳೂರು,ಜ.10- ಸಾರಿಗೆ ಸಂಸ್ಥೆಯನ್ನು ಬೆಳೆಸಲು ಹಾಗೂ ಸದೃಢಗೊಳಿಸಲು ಕಳೆದ 50 ವರ್ಷಗಳಿಂದ ಸಿಐಆರ್‍ಟಿ(ಸೆಂಟ್ರಲ್ ಇನ್ಸ್‍ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‍ಪೋರ್ಟ್ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯ ಎಂದು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ತಿಳಿಸಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹಾಗೂ ಸಿಐಆರ್‍ಟಿ ವತಿಯಿಂದ ಆಯೋಜಿಸಲಾಗಿದ್ದ ಸಿಎಂವಿಆರ್ ಕಂಪ್ಲೈನ್ಸ್ ಆಫ್ ವೆಹಿಕಲ್ಸ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕುರಿತಾದ ನೀತಿಯನ್ನು ರೂಪಿಸಲು ಪರಿಹಾರಗಳನ್ನು ಒದಗಿಸಲು ಸಿಐಆರ್‍ಟಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಈ ತರಬೇತಿ ಕಾರ್ಯಕ್ರಮ ವಿಭಿನ್ನವಾಗಿದೆ.ಮಧ್ಯಸ್ಥಗಾರರ ಜೊತೆ ಸಂವಹನ ನಡೆಸುವ ಅವಕಾಶವನ್ನು ಒದಗಿಸುವುದಲ್ಲದೆ ತರಬೇತಿಯಲ್ಲಿ ಭಾಗವಹಿಸಿರುವವರ ಜ್ಞಾನವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ.ಅಲ್ಲದೆ ಸಾರಿಗೆ ಸಂಸ್ಥೆಗಳ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಿದೆ ಎಂದು ಕಳಸದ್ ತಿಳಿಸಿದರು.

ಸಮಾರಂಭದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ಕರ್ತಾರ್ ಆರ್ ಲುಕಾಂಗ್, ಸಿಐಆರ್‍ಟಿ ನಿರ್ದೇಶಕ ಕ್ಯಾಪ್ಟನ್ ರಾಜೇಂದ್ರ.ಬಿ ಸನೀರ್ ಪಾಟೀಲ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ