
ಬೆಂಗಳೂರು, ಜ.10- ಗ್ರಾಮೀಣ ಅಂಗಡಿ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೇಸೀ ಆಹಾರ-ಸಂಪೂರ್ಣ ಆರೋಗ್ಯ ಸಂವಾದ ಕಾರ್ಯಕ್ರಮವನ್ನು ಇದೇ 13 ರಂದು ಬನಶಂಕರಿಯ ಸುಚಿತ್ರ ಫಿಲ್ಮ್ಂ ಸೊಸೈಟಿ ಮತ್ತು ರಾಜಾಜಿನಗರದ ಶ್ರೀರಾಮ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಯಮದ ಮುಖ್ಯ ವ್ಯವಸ್ಥಾಪಕ ಬಿ.ಗಂಗಾಧರಮೂರ್ತಿ, ಮುಧುಮೇಹ ಹೃದಯರೋಗ ಥೈರಾಯ್ಡ್ ಊಬಕಾಯ ಮತ್ತು ಕ್ಯಾನ್ಸರ್ ನಂತಹ ಆಧುನಿಕ ರೋಗಗಳ ನಿಯಂತ್ರಣ ಮತ್ತು ನಿರ್ಮೂಲನೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಆಹಾರ ತಜ್ಞ ಡಾ.ಖಾದರ್ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಅಂದು ಬೆಳಿಗ್ಗೆ 10 ಗಂಟೆಗೆ ಬನಶಂಕರಿಯಲ್ಲಿ ನಡೆಯುವ ಸಂವಾದದಲ್ಲಿ ಸಾಹಿತಿ ಬಿ.ಸುರೇಶ್, ಬಿಬಿಎಂಪಿ ಸದಸ್ಯೆ ಡಿ.ಹೆಚ್.ಲಕ್ಷ್ಮಿ ಉಮೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 4 ಗಂಟೆಗೆ ರಾಜಾಜೀನಗರದಲ್ಲಿ ಸಂವಾದ ನಡೆಯಲಿದ್ದು, ಶಾಸಕ ಎಸ್.ಸುರೇಶ್ಕುಮಾರ್, ಬಿಬಿಎಂಪಿ ಸದಸ್ಯೆ ದೀಪ ನಾಗೇಶ್ ಮತ್ತು ಶ್ರೀರಾಮ ಮಂದಿರಾ ಸೇವಾ ಮಂಡಳಿಯ ಉಪಾಧ್ಯಕ್ಷ ಕೆ.ಎಸ್.ಶ್ರೀಧರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಸಾರ್ವಜನಿಕ ಪ್ರವೇಶ ಉಚಿತವಾಗಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಅಂಗಡಿ ಪದಾಧಿಕಾರಿಗಳಾದ ಕೃಷ್ಣ ಕುಮಾರ್, ಸಿದ್ದು ಉಪಸ್ಥಿತರಿದ್ದರು.