ಬೆಂಗಳೂರು,ಜ.10- ಶಬರಿ ಮಲೆ ಕ್ಷೇತ್ರದ ಪಾವಿತ್ರ್ಯ ರಕ್ಷಣೆಗಾಗಿ ಇಂದಿನಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು,ಶ್ರೀ ಕ್ಷೇತ್ರದಲ್ಲಿ ನಡೆಯುವ ಪವಿತ್ರ ಮಕರ ಜ್ಯೋತಿಯ ಪುಣ್ಯಪರ್ವ ದಿನದಂದು ಎಲ್ಲಾ ದೇವಸ್ಥಾನ ಮತ್ತು ಭಜನಾಮಂದಿರಗಳಲ್ಲಿ ಸಂಜೆ ದೀಪ ಬೆಳಗಲಾಗುವುದು ಎಂದು ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರ್ಮಲ್‍ಕುಮಾರ್ ಸುರಾನ ತಿಳಿಸಿದ್ದಾರೆ.
ಶಬರಿಮಲೆ ಕರ್ಮ ಸಮಿತಿ, ಸಂಘಪರಿವಾರದ ಕಾರ್ಯಕರ್ತರು , ಹಿಂದೂ ಸಮುದಾಯದ ಕಾರ್ಯಕರ್ತರು ಹಾಗೂ ಅಪಾರ ಮಹಿಳಾ ಭಕ್ತರ ಮೇಲೆ ಕೇರಳ ಸರ್ಕಾರವು ಕೇಸ್ ದಾಖಲಿಸಿರುವುದನ್ನು ಖಂಡಿಸಿದ್ದಾರೆ.
ಕೇರಳ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ನಿವೇದಿತಾ ವಿರುದ್ದ ಸುಳ್ಳು ಕೇಸ್ ದಾಖಲಿಸಿ ಕೇರಳ ಸರ್ಕಾರ ಕ್ರೌರ್ಯ ಮೆರೆದಿದೆ.
ಕೇರಳ ಬಿಜೆಪಿ ಕಾರ್ಯದರ್ಶಿ ಹಾಗೂ ಕೇರಳ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ರೇಣು ಸುರೇಶ್ ಶಬರಿಮಲೆ ಆಚಾರ ಸಂರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವಾಗ ಪೆÇಲೀಸರ ಲಾಠಿ ಚಾರ್ಜ್‍ನಿಂದ ಗಂಭೀರ ಗಾಯಗೊಂಡಿದ್ದಾರೆ.
ಮೂರು ಸಾವಿರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಮೇಲೆ ಕೇರಳ ಸರ್ಕಾರ ಸುಳ್ಳು ಕೇಸ್ ದಾಖಲಿಸಿದೆ ಎಂದು ಹೇಳಿದರು.