ಬೆಂಗಳೂರು,ಜ.10-ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ ಹಲವು ಸಾಧನೆಗಳನ್ನು ಸರಿಗಟ್ಟಿದ್ದು, ಸಂಸ್ಥೆಯ ಉನ್ನತಿಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ತಂತ್ರಜ್ಞಾನ ನೆರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿಂದು ಕರ್ನಾಟಕ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಯಲದ ಸುವರ್ಣ ಮಹೋತ್ಸವದ ಅಂಗವಾಗಿ ಇಂದು ಮತ್ತು ನಾಳೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ನ್ಯಾಯ ವಿಜ್ಞಾನದಲ್ಲಿ ಉದಯೋನ್ಮುಖ ಬೆಳವಣಿಗೆಗಳು ಎಂಬ ಸಮ್ಮೇಳನದಲ್ಲಿ ಮಾತನಾಡಿದರು.
ವಿಜ್ಞಾನಿಗಳ ಕೌಶಲ್ಯ ವೃದ್ಧಿಗೆ ನಿರಂತರ ತರಬೇತಿ ಅಗತ್ಯ. ಆಧುನಿಕ ಕಾಲದಲ್ಲಿ ಅಪರಾಧಗಳ ಸ್ವರೂಪ ಬದಲಾಗುತ್ತಿವೆ. ಕಾಲಕಾಲಕ್ಕೆ ವಿಜ್ಞಾನಿಗಳಿಗೆ ತರಬೇತಿ ಹೆಚ್ಚಿಸಬೇಕು.ಈಗಾಗಲೇ ಈ ಕುರಿತಂತೆ ಕ್ರಮ ವಹಿಸಲಾಗುತ್ತಿದ್ದು, ತರಬೇತಿಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ತರಬೇತಿಯಿಂದ ಪರಿಣಿತಿ ಹೆಚ್ಚುವುದಲ್ಲದೆ ಕ್ರಿಮಿನಲ್ ಪ್ರಕರಣ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಎಫ್‍ಎಸ್‍ಎಲ್ ವಿಜ್ಞಾನಿಗಳ ಪಾತ್ರ ಹೆಚ್ಚಿನ ಜವಾಬ್ದಾರಿಯುತವಾಗಿದ್ದು, ಅನೇಕ ಪ್ರಕರಣಗಳಲ್ಲಿ ಉತ್ತಮ ಸಹಕಾರ ನೀಡುತ್ತಿದ್ದಾರೆ.ನ್ಯಾಯ ವಿಜ್ಞಾನಗಳಲ್ಲಿ ಪಾರದರ್ಶಕತೆ ಇರುತ್ತದೆ. ಅದಕ್ಕಾಗಿ ಪೂರಕವಾಗಿ ಕೆಲಸ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕೆಲವು ಕಾಲೇಜುಗಳಲ್ಲಿ ವಿಧಿವಿಜ್ಞಾನ ಕೋರ್ಸ್‍ಗಳನ್ನು ಆರಂಭಿಸಲಾಗಿದ್ದು, ಜ್ಞಾನವೃದ್ದಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.ದಿನೇ ದಿನೇ ಹೆಚ್ಚುತ್ತಿರುವ ತಂತ್ರಜ್ಞಾನ ಬಳಕೆಯಿಂದ ಮಾನವನಿಂದಾಗುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ.ಇದನ್ನು ಪ್ರಕರಣಗಳ ತನಿಖೆ ವೇಳೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಎಫ್‍ಎಸ್‍ಎಲ್ ಸಂಸ್ಥೆ ಅಪರಾಧ ಪ್ರಕರಣಗಳ ಪತ್ತೆಹಚ್ಚುವಲ್ಲಿ ಬೆನ್ನೆಲುಬಾಗಿದೆ. ಅಗತ್ಯ ಸಹಾಯ ದೊರೆತರೆ ತ್ವರಿತವಾಗಿ ತಪ್ಪಿತಸ್ಥರನ್ನು ಪತ್ತೆಹಚ್ಚುವ ಜೊತೆಗೆ ತಪ್ಪಿತಸ್ಥರಲ್ಲದವರನ್ನು ಶಿಕ್ಷೆಯಿಂದ ತಪ್ಪಿಸಲು ಸಾಧ್ಯ.ನಿಖರ ಮತ್ತು ವಾಸ್ತವಿಕ ಅಂಶಗಳನ್ನು ಒಳಗೊಂಡ ಹಲವು ಪ್ರಕರಣಗಳು ತನಿಖೆಗೆ ಇಂತಹ ತಂತ್ರಜ್ಞಾನ ಆಧಾರಿತ ಪ್ರಯೋಗಾಲಯಗಳು ಹೊಂದಿರಬೇಕಿದೆ ಎಂದರು.
ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಮಾತನಾಡಿ, ಪ್ರಯೋಗಾಲಯ ನಡೆದು ಬಂದ ಹಾದಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿರುವುದನ್ನು ಪ್ರಸ್ತಾಪಿಸಿ ಡಿಎನ್‍ಎ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೆÇೀಸ್ಟ್ ಮಾಸ್ಟರ್ ಜನರಲ್ ಅರವಿಂದ್ ವರ್ಮ, ಹಿರಿಯ ಪೆÇಲೀಸ್ ಅಧಿಕಾರಿಗಳಾದ ಎಂ.ಎಂ.ರೆಡ್ಡಿ, ಪ್ರವೀಣ್‍ಸೂದ್ ಮತ್ತಿತರರು ಉಪಸ್ಥಿತರಿದ್ದರು.