ಬೆಂಗಳೂರು, ಜ.9- ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಸುಸೂತ್ರವಾಗಿ ಬಗೆಹರಿಯುತ್ತವೆ. ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ಸ್ಪ್ಟಪಡಿಸಿದರು.
ಕೆಲವು ನಿಗಮ ಮಂಡಳಿಗಳ ನೇಮಕ ತಡೆಹಿಡಿದಿರುವ ಹಿಂದೆ ಅಗೌರವ ಸಲ್ಲಿಸುವ ಉದ್ದೇಶವಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕೆಲವು ನಿಗಮ ಮಂಡಳಿಗಳ ನೇಮಕ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಕ್ರಾಂತಿ ವೇಳೆ ಮೈತ್ರಿ ಸರ್ಕಾರಕ್ಕೆ ಡ್ಯಾಮೇಜ್ ಆಗಲಿದೆ ಎಂದು ಬಿಜೆಪಿಯವರು ಹೇಳಿದ್ದಾರೆ ಎಂಬ ಬಗ್ಗೆ ಗಮನಸೆಳೆದಾಗ, ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿಯವರು ಒಂದಲ್ಲ, ಒಂದು ರೀತಿಯ ಗಡುವು ನೀಡುತ್ತಲೇ ಇದ್ದಾರೆ. ಈಗಾಗಲೇ ಬಹಳಷ್ಟು ಗಡುವುಗಳು ಮುಗಿದಿವೆ. ಸಂಕ್ರಾಂತಿಯೂ, ಶಿವರಾತ್ರಿಯೂ ಬರಲಿದೆ. ಆನಂತರ ಯುಗಾದಿ ಗಡುವು ಕೂಡ ಬರಲಿದೆ ಎಂದು ತಿಳಿಸುವ ಮೂಲಕ ಬಿಜೆಪಿಯವರು ಹೇಳುವ ಗಡುವುಗಳಿಗೆ ಕೊನೆ ಇಲ್ಲ ಎಂಬುದನ್ನು ಈ ರೀತಿ ವ್ಯಾಖ್ಯಾನಿಸಿದರು.