ಬೆಂಗಳೂರು,ಜ.9-ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಜ.17ರಂದು ಚುನಾವಣೆ ನಡೆಯಲಿದೆ. ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾದ ಪರಿಣಾಮ ಚುನಾವಣೆಯನ್ನು ಮುಂದೂಡಲಾಗಿತ್ತು.
ಕಳೆದ ಜ.5ರಂದು ಚುನಾವಣೆ ನಡೆಯುತ್ತದೆ ಎಂದು ಹೇಳಲಾಗಿತ್ತಾದರೂ ಗೊಂದಲ ಬಗೆಹರಿಯದ ಪರಿಣಾಮ ಮತ್ತೆ ಚುನಾವಣೆಯನ್ನು ಮುಂದಕ್ಕೆ ಹಾಕಲಾಗಿತ್ತು. ಇದೀಗ ಜ.17ರಂದು ಚುನಾವಣೆ ನಡೆಸಲು ದಿನಾಂಕ ನಿಕ್ಕಿಯಾಗಿದೆ.
12 ಸ್ಥಾಯಿ ಸಮಿತಿಗಳ ಪೈಕಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಗೊಂದಲವಾಗಿದೆ.
ಈ ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗಳು ಪೈಪೆÇೀಟಿ ನಡೆಸಿರುವುದು ಕೈ ಮುಖಂಡರಿಗೆ ದೊಡ್ಡ ತಲೆ ನೋವು ತಂದಿದೆ.
ಹೀಗಾಗಿ ಈ ಬಾರಿ ಕೌನ್ಸಿಲ್ ಸಭೆಯಲ್ಲಿ ಚುನಾವಣೆ ನಡೆಸದೇ ಮೇಯರ್ ಕಚೇರಿಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ಗೊಂದಲ ಬಗೆಹರಿಕೆಗೆ ಶಾಸಕ ರಾಮಲಿಂಗಾರೆಡ್ಡಿಯವರು ಅಖಾಡಕ್ಕೆ ಇಳಿದಿದ್ದು, ಅತೃಪ್ತ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.