ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಗ್ರಾಹಕರಿಗೆ ಪೋನ್ ಮಾಡಿ ಬ್ಯಾಂಕ್ ಮಾಹಿತಿ ಪಡೆದು ಹಣ ಡ್ರಾ ಮಾಡಿದ್ದ ವ್ಯಕ್ತಿಯ ಬಂಧನ

ಮೈಸೂರು, ಜ.9- ಬ್ಯಾಂಕ್ ಮ್ಯಾನೇಜರ್ ಎಂದು ಗ್ರಾಹಕರೊಬ್ಬರಿಗೆ ದೂರವಾಣಿ ಕರೆ ಮಾಡಿ ಬ್ಯಾಂಕ್‍ನ ಮಾಹಿತಿ ಪಡೆದು 1.25 ಲಕ್ಷ ರೂ. ಲಪಟಾಯಿಸಿದ್ದ ಬಿಹಾರ ಮೂಲದ ಬ್ರಿಜ್ ಕಿಶೋರ್ ಪ್ರಸಾದ್‍ನನ್ನು ಸೈಬರ್ ಕ್ರೈಂ ಪೆÇಲೀಸರು ಬಂಧಿಸಿದ್ದಾರೆ.

ನಗರದ ಎಂ.ಸಿ.ಪರಶುರಾಮ್ ಅವರು ಎಸ್‍ಬಿಐ ಶಾಖೆಯಲ್ಲಿ ಖಾತೆ ಹೊಂದಿದ್ದು, 2018 ಅಕ್ಟೋಬರ್ 13ರಂದು ಆರೋಪಿ ಇವರಿಗೆ ಕರೆ ಮಾಡಿ ತಾನು ಬ್ಯಾಂಕ್ ಮ್ಯಾನೇಜರ್. ತಮ್ಮ ಖಾತೆಯ ಮಾಹಿತಿ ಕೊಡಿ ಎಂದು ಪಡೆದು ಹಣವನ್ನು ಡ್ರಾ ಮಾಡಿದ್ದನು.

ತದನಂತರ ಪರಶುರಾಮ್ ಅವರು ಬ್ಯಾಂಕ್‍ಗೆ ಹೋಗಿ ಹಣ ಡ್ರಾ ಮಾಡಲು ಮುಂದಾದಾಗ ಖಾತೆಯಲ್ಲಿದ್ದ ಹಣ ಡ್ರಾ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಶುರಾಮ್ ಅವರು ಸೈಬರ್‍ಕ್ರೈಂ ಪೆÇಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಇನ್ಸ್‍ಪೆಕ್ಟರ್ ರಾಜಶೇಖರ್ ಮತ್ತು ಸಿಬ್ಬಂದಿ ಹಲವು ಮಾಹಿತಿಗಳನ್ನು ಕಲೆ ಹಾಕಿ ಕೊನೆಗೂ ಬಿಹಾರ ಮೂಲದ ಆರೋಪಿಯೊಬ್ಬನನ್ನು ಬಂಧಿಸಿ ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ