ಬಾರ್ ಒಂದರಲ್ಲಿ ಉಲ್ಬಣಗೊಂಡ ಗಲಭೆ ಏಳು ಮಂದಿಯ ಹತ್ಯೆಯಲ್ಲಿ ಅಂತ್ಯ

ಮೆಕ್ಸಿಕೋ ಸಿಟಿ, ಜ.8 (ಪಿಟಿಐ)- ಬಾರ್ ಒಂದರಲ್ಲಿ ಉಲ್ಬಣಗೊಂಡ ಗಲಭೆ ಏಳು ಮಂದಿಯ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮೆಕ್ಸಿಕೋದ ಕೆರಿಬಿಯನ್ ಕರಾವಳಿ ನಗರಿ ಪ್ಲಾಯಾ ಡೆಲ್ ಕಾರ್ಮೆನ್‍ನಲ್ಲಿ ನಡೆದಿದೆ.

ಕಡಿಮೆ ಆದಾಯದ ಜನರೇ ಹೆಚ್ಚಾಗಿರುವ ಈ ಪ್ರದೇಶದ ಲಾಸ್ ವರ್ಜಿಜಿಯಾಸ್ ಬಾರ್‍ನಲ್ಲಿ ಎರಡು ಗುಂಪುಗಳ ನಡುವೆ ಜಗಳವಾಯಿತು. ಇದು ವಿಕೋಪಕ್ಕೆ ಹೋಗಿ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಪರಿಣಾಮ ಏಳು ಮಂದಿ ಮೃತಪಟ್ಟು ಕೆಲವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ನನ್ನ ಸ್ನೇಹಿತರೊಂದಿಗೆ ಬಿಯರ್ ಕುಡಿಯುತ್ತಿದ್ದ. ಪಕ್ಕದ ಕ್ಯಾಬಿನ್‍ನಲ್ಲಿ ಜಗಳವಾಗಿ ಪಿಸ್ತೂಲ್‍ಗಳಿಂದ ಗುಂಡು ಹಾರಿಸಿದ ಶಬ್ದ ಕೇಳಿ ಬಂದಿತು. ಅಲ್ಲಿ ಹೋಗಿ ನೋಡಿದಾಗ ನನ್ನ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದರು. ನಾನು ಅದೃಷ್ಟವತಾತ್ ಪಾರಾದೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
ಹಂತಕರು ಅಪರಿಚಿತರಾಗಿದ್ದು, ಅವರ ಪತ್ತೆಗೆ ತೀವ್ರ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ