ಬೆಂಗಳೂರು, ಜ.8- ಡಿಜಿಟಲ್ ಹಣ ಸಂದಾಯದ ಅತಿ ದೊಡ್ಡ ಸಂಸ್ಥೆಯಾದ ಪೇಟಿಎಂ ಈಗ ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಹೆಲ್ಪ್ ಡೆಸ್ಕ್ ಸೇವೆಯನ್ನು ಆರಂಭಿಸಿದೆ.
ಪೇಟಿಎಂ ಆ್ಯಪ್ ಮೂಲಕ ಬಸ್ ಟಿಕೆಟ್‍ಗಳನ್ನು ಬುಕ್ ಮಾಡಿ ಗ್ರಾಹಕರು ನಿಗದಿತ ಸ್ಥಳಗಳಿಗೆ ತೆರಳಬಹುದಾಗಿದೆ.ಇದಲ್ಲದೆ ಪ್ರಯಾಣಿಕರ ಪ್ರತಿಯೊಂದು ಅವಶ್ಯಕತೆಗಳು ಕೂಡ ಈ ಹೆಲ್ಪ್ ಡೆಸ್ಕ್ ಮೂಲಕ ಪೂರೈಸಲಿದೆ.
ವಿಶೇಷವೆಂದರೆ ತನ್ನ ಗ್ರಾಹಕರಿಗೆ ಉಚಿತ ನೀರು, ವೈ ಫೈ ಸೇವೆ ಹಾಗೂ ಪೋರ್ಟರ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ.