ಬೆಂಗಳೂರು, ಜ.8- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನರನ್ನು ಎತ್ತಿ ಕಟ್ಟುವ ಷಡ್ಯಂತ್ರಗಳು ನಡೆಯುತ್ತಿದ್ದು ಅದರ ಭಾಗವಾಗಿ ಕರೆ ನೀಡಲಾದ ಭಾರತ್ ಬಂದ್‍ಗೆ ಇಲ್ಲಿನ ಕಾಂಗ್ರೆಸ್, ಜೆಡಿಎಸ್ ಬೆಂಬಲ ನೀಡಿ ನಾವು ಒಂದೇ ನಾಣ್ಯದ ಎರಡು ಮುಖಗಳು ಎಂದು ತೋರಿಸಿಕೊಟ್ಟಿವೆ. ಆದರೆ ಬಂದ್ ಅನ್ನು ವಿಫಲಗೊಳಿಸಿ ಜನ ಮೋದಿ ಸರ್ಕಾರವನ್ನು ಬೆಂಬಲಿಸಿದ್ದು ಅದಕ್ಕಾಗಿ ಜನತೆಗೆ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಎಡಪಕ್ಷಗಳು ಕರೆ ನೀಡಿದ್ದ ಭಾರತ ಬಂದ್ ವಿಫಲವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಷಡ್ಯಂತ್ರ ಮಾಡಿದ್ದ ಎಡ ಪಕ್ಷಗಳಿಗೆ ದೇಶದ ಜನ ಬಂದ್ ವಿಫಲಗೊಳಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ.ಅವರಿಗೆ ಕೈ ಜೋಡಿಸಿರುವ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದಲ್ಲಿ ಎಡಪಕ್ಷಗಳಿಗೆ ಪರಾವಲಂಬಿಯಾಗಿದೆ ಎನ್ನುವುದನ್ನು ಸಾಬೀತುಪಡಿಸಿವೆ ಎಂದರು.
ಮೋದಿ ಅವರ ನಿರ್ಧಾರದಿಂದಾಗಿ ಮೀಸಲಾತಿ ವಿಚಾರದಲ್ಲಿ ಬಡ ಜನರ ಆಕ್ರೋಶ ಸಮಾಧಾನ ಸ್ಥಿತಿಗೆ ಬಂದಿದೆ ಆದರೆ ದುರ್ದೈವದ ಸಂಗತಿ ಎಂದರೆ ಒಂದು ಕಡೆ ಜಾತಿಯನ್ನು ಎತ್ತಿ ಕಟ್ಟಿ ಹೋರಾಟ ಮಾಡಿಸುವವರೇ ಇದನ್ನು ವಿರೋಸುತ್ತಿದ್ದಾರೆ.2014 ರಿಂದ ಮೂರು ಜಾತಿ ಹೋರಾಟ ನಡೆಯಿತು. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ, ಹರಿಯಾಣದಲ್ಲಿ ಜಾಡ್ ಸಮುದಾಯಕ್ಕೆ ಮತ್ತು ಗುಜರಾತ್ ನಲ್ಲಿ ಪಟೇಲ್ ಸಮುದಸಯಕ್ಕೆ ಮೀಸಲಾತಿ ನೀಡುವಂತೆ ಹೋರಾಟ ನಡೆಯಿತು, ಅಲ್ಪೇಷ್ ಠಾರ್ಕೂ ಹಿಂದುಳಿದ ಸಮುದಾಯದ ನೇತೃತ್ವ ವಹಿಸಿದರೆ, ಹಾರ್ದಿಕ್ ಪಟೇಲ್ ಪಟೇಲ್ ಸಮುದಾಯ ನೇತೃತ್ವ, ಜಿಗ್ನೇಶ್ ಮೇವಾಜಿ ದಲಿತ ಸಮುದಾಯದ ನೇತೃತ್ವ ವಹಿಸಿ ಹೋರಾಟ ನಡೆಸಿದರು, ಸಾರ್ವಜನಿಕವಾಗಿ ಮೀಸಲಾತಿ ಕೇಳುವಾಗ ಪರಸ್ಪರ ಅವರೆಲ್ಲ ವಿರುದ್ಧವಿದ್ದರೂ ಆದರೆ ಬಿಜೆಪಿ ವಿರುದ್ಧ ಅವರೆಲ್ಲಾ ಒಟ್ಟಾದರು. ಹಾಗೆ ಒಟ್ಟಾದ ಜನ ಮೋದಿ ನಿರ್ಧಾರವನ್ನು ಸ್ವಾಗತ ಮಾಡಬೇಕಿತು.್ತ ಅದರ ಬದಲು ವಿರೋಧಕ್ಕೆ ಕೈ ಹಾಕಿದ್ದು ದುರಾದೃಷ್ಟಕರ ಎಂದು ಹೇಳಿದರು.
ಜಾತಿ ಜಾತಿಗಳನ್ನು ಎತ್ತಿ ಕಟ್ಟಿ ಮೀಸಲಾತಿ ಹೋರಾಟ ಮಾಡುತ್ತಿದ್ದವರಿಗೆ ಈಗ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಟ್ಟಿದ್ದಾರೆ. ಯಾರದೇ ಮೀಸಲಾತಿ ಕಸಿದುಕೊಳ್ಳದೆ ಎಲ್ಲ ವರ್ಗದ ಬಡವರಿಗೆ ಮೀಸಲು ಕಲ್ಪಿಸುವ ಅಂಬೇಡ್ಕರ್ ಆಶಯದಂತೆ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.ಇದೇ ವೇಳೆ ಕ್ರೀಮಿಲೇರ್ಯ ಸಿದ್ದಾಂತದ ಬಗ್ಗೆ ನಾವು ಈಗ ಮಾತನಾಡಿದರೆ ಬಲಿತ ವರ್ಗದವರು ನಮ್ಮ ವಿರುದ್ದ ಬಡ ದಲಿತ ವರ್ಗದವರನ್ನು ಎತ್ತಿ ಕಟ್ಟುವ ಅಪಾಯವಿದೆ. ಹಾಗಾಗಿ ಮೊದಲಿಗೆ ಆಯಾಯಾ ವರ್ಗದೊಳಗೆ ಕ್ರೀಮಿ ಲೇರ್ಯ ಸಿದ್ದಾಂತದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯ ಲಾಭ ರಾಜ್ಯದ ಜನತೆಗೆ ಸಿಗದಂತೆ ರಾಜ್ಯ ಸರ್ಕಾರ ಷಡ್ಯಂತ್ರ ಮಾಡಿದೆ.ಅದಕ್ಕೆ ಪಟ್ರೋಲ್ ಡೀಸೆಲ್ ಮೇಲಿನ ಸೆಸ್ ಅನ್ನು ಎರಡು ರೂ.ಹೆಚ್ಚಿಸಲಾಗಿದೆ.ಹಿಂದೆ ಇದೇ ಸರ್ಕಾರ ಮೋದಿ ವಿರುದ್ಧ ಹೋರಾಟ ನಡೆಸಿತ್ತು ಬಂದ್ ನಡೆಸಿತ್ತು ಆದರೆ ಇಂದು ದರ ಇಳಿಕೆಯಾದರೂ ತೆರಿಗೆ ಹೆಚ್ಚಿಸಿ ಜನತೆಯ ಮೇಲೆ ಭಾರ ಹಾಕಿದೆ.
ಇದೀಗ ಅಡುಗೆ ಅನಿಲದರ ಕಡಿಮೆಯಾಗಿದೆ ಕಾಂಗ್ರೆಸ್ ನ ಮಹಿಳಾ ಘಟಕದವರು ಈಗ ಟೌನ್ ಹಾಲ್ ಮುಂದೆ ಕಟ್ಟಿಗೆ ಒಲೆ ಹಚ್ಚುವ ಅಗತ್ಯವಿಲ್ಲ. ಸಿಲಿಂಡರ್ ಬಳಸಿ ಅಡುಗೆ ಮಾಡಬಹುದು.ಎತ್ತಿನ ಗಾಡಿಯಲ್ಲಿ ಓಡಾಡಿ ಪ್ರತಿಭಟಿಸಿದ ದಿನೇಶ್ ಗುಂಡೂರಾವ್ ಅವರು ಉಡಾನ್ ಯೋಜನೆಯಡಿ ವಿಮಾನದಲ್ಲಿ ಓಡಾಡಬಹುದು ಎಂದು ಸಿ.ಟಿ ರವಿ ಕೈ ನಾಯಕರ ಕಾಲೆಳೆದರು.