ಐತಿಹಾಸಿಕ ಸರಣಿ ಗೆದ್ದ ಟೀಂಇಂಡಿಯಾಕ್ಕೆ ಬಿಸಿಸಿಐ ಭರ್ಜರಿ ಗಿಫ್ಟ್

ಆಸಿಸ್ ನಾಡಲ್ಲಿ ಚೊಚ್ಚಲ ಐತಿಹಾಸಿಕ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಅಭಿನಂದಿಸಿದ್ದು ಭರ್ಜರಿ ಗೆಲುವಿನ ಉಡುಗೊರೆ ನೀಡಿದೆ.

ಸೋಮವಾರ ಸಿಡ್ನಿ ಟೆಸ್ಟ್ ಪಂದ್ಯವನ್ನ ಡ್ರಾ ಮಾಡಿಕೊಳ್ಳುವ ಮೂಲಕ ಕೊಹ್ಲಿ ಪಡೆ 2-1 ಅಂತರದಿಂದ ಸರಣಿಯನ್ನ ಕೈ ವಶ ಮಾಡಿಕೊಂಡು ಕಾಂಗರೂ ನಾಡಲ್ಲಿ 72 ವರ್ಷಗಳ ಬಳಿಕ ಚೊಚ್ಚಲ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಂಡು ಸಾಧನೆ ಮಾಡಿತು.

ಆಸಿಸ್ ವಿರುದ್ಧ ಆಡುವ ಹನ್ನೊಂದರ ಬಳಗದಲ್ಲಿ ಆಡಿದ ಆಟಗಾರರಿಗೆ ತಲಾ 15 ಲಕ್ಷ ರೂಪಾಯಿ ಬಹುಮಾನ ಮತ್ತು ಖಾಯಂ ಆಟಗಾರರಿಗೆ 7.5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ತಂಡದ ಕೋಚ್ ರವಿ ಶಾಸ್ತ್ರಿ ಸೇರಿದಂತೆ ಸಹಾಯಕ ಕೋಚ್‍ಗಳಿಗೆ 25 ಲಕ್ಷರೂಪಾಯಿ ಬಹುಮಾನ  ನೀಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ