ಬೆಂಗಳೂರು, ಜ.8-ವಿವಿಧ ಕಾರ್ಮಿಕ ಸಂಘಟನೆಗಳ ಭಾರತ್ ಬಂದ್ ಕರೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ವಿರಳವಾಗಿತ್ತು.
ಬಂದ್ನಿಂದಾಗಿ ಬಸ್ ಸಂಚಾರದಲ್ಲಿ ವ್ಯತ್ಯಯವಾದ್ದರಿಂದ ಸರ್ಕಾರಿ ಕಚೇರಿಗಳಿಗೆ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಅದೇ ರೀತಿ ಸಾರ್ವಜನಿಕರ ಸಂಖ್ಯೆಯು ಕಡಿಮೆ ಇದ್ದುದು ಕಂಡು ಬಂತು.
ರಾಜ್ಯದ ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಿಗೆ ರಜೆ ಇಲ್ಲದಿದ್ದರೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಹಾಜರಾತಿ ಕಡಿಮೆ ಇತ್ತು.
ವಿಧಾನಸೌಧ, ವಿಕಾಸಸೌಧದಲ್ಲಿ ಸಾರ್ವಜನಿಕರ ಓಡಾಟವೂ ಎಂದಿನಂತೆ ಇರಲಿಲ್ಲ. ಅದೇ ರೀತಿ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಖ್ಯೆ ಕಚೇರಿಗಳಲ್ಲಿ ಕಡಿಮೆ ಇದ್ದುದು ಕಂಡುಬಂತು.