ಅಸ್ಸಾಂ ಜನತೆ ಸಿಟ್ಟಿಗೆಬ್ಬಿಸಿದ ಪೌರತ್ವ ಮಸೂದೆ ತಿದ್ದುಪಡಿ… ಅಷ್ಟಕ್ಕೂ ಈ ತಿದ್ದುಪಡಿಯಲ್ಲಿ ಏನಿದೆ..?

ನವದೆಹಲಿ: ಭಾರತದ ಈಶಾನ್ಯ ರಾಜ್ಯ ಅಸ್ಸಾಂ ಕೇಂದ್ರದ ನಡೆಯ ವಿರುದ್ಧ ಅಕ್ಷರಶಃ ಕೆರಳಿ ಕೆಂಡವಾಗಿದೆ. ಇಂದು ಸಂಸತ್​ನಲ್ಲಿ ಮಂಡನೆಯಾಗಲಿರುವ ಪೌರತ್ವ ಮಸೂದೆ ತಿದ್ದುಪಡಿಯ ವಿರುದ್ಧ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಸ್ಸಾಂ ನಿವಾಸಿಗಳನ್ನು ಕುಪಿತರಾಗುವಂತೆ ಮಾಡಿದ ಈ ಮಸೂದೆಯ ಒಟ್ಟಾರೆ ಸಾರಾಂಶವೇನು..? ಈ ಮಸೂದೆ ಜಾರಿಯಾದಲ್ಲಿ ರಾಜ್ಯಕ್ಕಾಗುವ ತೊಂದರೆಗಳೇನು ಎನ್ನುವ ವರದಿ ಇಲ್ಲಿದೆ…

ಏನಿದು 2016 ಪೌರತ್ವ ಮಸೂದೆ ತಿದ್ದುಪಡಿ..
ಪೌರತ್ವ ತಿದ್ದುಪಡಿ ಮಸೂದೆ ಮೊದಲಿಗೆ ಲೋಕಸಭೆಯಲ್ಲಿ ಜುಲೈ 19ರಂದು ಪ್ರಸ್ತಾಪಿಲಾಯಿತು. 1995 ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತರುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಮಾಡಲಾಗಿತ್ತು.
ಈ ಮಸೂದೆ ಸಂಸತ್​ನಲ್ಲಿ ಅಂಗೀಕೃತವಾದರೆ ಅಫ್ಘಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಕೆಲ ಸಮುದಾಯ(ಹಿಂದೂ, ಸಿಖ್​​, ಬೌದ್ಧ, ಜೈನ್​​,ಪಾರ್ಸಿ,ಕ್ರಿಶ್ಚಿಯನ್)​​ಕ್ಕೆ ಪೌರತ್ವ ಲಭ್ಯವಾಗುತ್ತದೆ.
ಈ ಮೊದಲು ಇಂತಹ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ಲಭ್ಯವಾಗಬೇಕಾದರೆ ಹನ್ನೊಂದು ವರ್ಷ ಭಾರತದಲ್ಲೇ ನೆಲೆಸಬೇಕಾಗಿತ್ತು. ಸದ್ಯ ತಿದ್ದುಪಡಿಯಿಂದ ಆರು ವರ್ಷ ಬಳಿಕ ಅಂತ ಅಕ್ರಮ ವಲಸಿಗರು ಭಾರತೀಯ ಪೌರತ್ವ ಪಡೆಯುತ್ತಾರೆ.
1995 ಭಾರತೀಯ ಪೌರತ್ವ ಕಾಯ್ದೆ ಏನು ಹೇಳುತ್ತದೆ..?

  • ಭಾರತದಸಂವಿಧಾನದ 9ನೇವಿಧಿಯಪ್ರಕಾರಯಾವುದೇಭಾರತೀಯಸ್ವತಂತ್ರವಾಗಿಬೇರೆದೇಶದಪೌರತ್ವಪಡೆದಲ್ಲಿಆತನಭಾರತೀಯಪೌರತ್ವರದ್ದಾಗುತ್ತದೆ.
  • ಭಾರತದಿಂದಹೊರಗಡೆಜನವರಿ 26,1950ರನಂತರಡಿಸೆಂಬರ್​​ 10,1992ರಒಳಗೆಜನಿಸಿದಎಲ್ಲರೂಜನ್ಮತಃಭಾರತೀಯಪೌರರಾಗಿರುತ್ತಾರೆ.
  • ಡಿಸೆಂಬರ್​​​ 3, 2004ರಿಂದಭಾರತದಿಂದಹೊರಗಡೆಜನಿಸಿದವರುಭಾರತೀಯಪೌರರುಎಂದುಪರಿಗಣಿಸಲಾಗುವುದಿಲ್ಲ. ಪೌರತ್ವಬೇಕಾದಲ್ಲಿಜನಿಸಿದಒಂದುವರ್ಷದಒಳಗಾಗಿಭಾರತೀಯದೂತವಾಸದಲ್ಲಿನೋಂದಣಿಮಾಡಿಸಬೇಕು.
  • 1955ರಸೆಕ್ಷನ್ 8ರಪ್ರಕಾರವಯಸ್ಕತನ್ನಪೌರತ್ವತ್ಯಾಗಮಾಡಿದಲ್ಲಿಆತಭಾರತೀಯಪೌರತ್ವಕಳೆದುಕೊಳ್ಳುತ್ತಾನೆ.
    ಅಕ್ರಮ ವಲಸಿಗರು ಯಾರು..?
    ಪೌರತ್ವ ಕಾಯ್ದೆ 1955ರ ಪ್ರಕಾರ ಯಾವುದೇ ವ್ಯಕ್ತಿ ಭಾರತವನ್ನು ಅಧೀಕೃತ ಪಾಸ್​ಪೋರ್ಟ್​ ಹೊಂದಿರದೆ ಪ್ರವೇಶಿಸಿ, ವೀಸಾ ಅವಧಿ ಮುಗಿದರೂ ಭಾರತದಲ್ಲೇ ಉಳಿದರೆ ಆತ ಅಕ್ರಮ ವಲಸಿಗನಾಗುತ್ತಾನೆ. ನಕಲಿ ದಾಖಲೆ ಮೂಲಕ ಭಾರತವನ್ನು ಪ್ರವೇಶಿದರೂ ಆತನನ್ನು ಅಕ್ರಮ ವಲಸಿಗ ಎಂದು ಪರಿಗಣಿಸಲಾಗುತ್ತದೆ.
    ಭಾರತೀಯ ಪೌರತ್ವಕ್ಕೆ ಬೇಕಾದ ಮಾನದಂಡಗಳು:
    1955ರ ಪೌರತ್ವ ಕಾಯ್ದೆ ಭಾರತೀಯ ಪೌರತ್ವ ಪಡೆಯಬೇಕಾದರೆ ಒಂದಷ್ಟು ಮಾನದಂಡಗಳನ್ನು ನೀಡಿದೆ. ಅವುಗಳು ಇಂತಿವೆ..
    ಜನನ
    2. ಮೂಲ
    3. ನೋಂದಣಿ
    4. ನೈಸರ್ಗಿಕರಣ
    5. ಪ್ರದೇಶದ ಸಂಯೋಜನೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ