ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನವನ್ನಾಧರಿಸಿದ ಚಿತ್ರ ಸೆಟ್ಟೇರಿದೆ. ಈಗಾಗಲೇ ಚಿತ್ರದ ಪೋಸ್ಟರ್ನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಮೇರಿ ಕೋಮ್ ಸಿನಿಮಾ ಮಾಡಿದ್ದ ಓಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬಾಲಿವುಡ್ ನಟ ವಿವೇಕ್ ಒಬೇರಾಯ್ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮುಂಬೈನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಪೋಸ್ಟರ್ ಒಟ್ಟು 27 ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಪೋಸ್ಟರ್ನಲ್ಲಿ ಮೋದಿ ಅವರ ಮೆಚ್ಚಿನ ಹಳದಿ ಬಣ್ಣದ ಕುರ್ತಾ ಧರಿಸಿರುವ ವಿವೇಕ್ ಒಬೇರಾಯ್ ತ್ರಿವರ್ಣ ಧ್ವಜದ ಮುಂಭಾಗದಲ್ಲಿ ನಿಂತಿದ್ದಾರೆ. ಮೇಲ್ಭಾಗದಲ್ಲಿ ‘ದೇಶಭಕ್ತೀ ಹಿ ಮೇರಿ ಶಕ್ತೀ ಹೆ’ ಎಂದು ಬರೆಯಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ್ ಒಬೇರಾಯ್, ಯಾವುದೇ ಓರ್ವ ನಟನಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಿದು. ಚಿತ್ರೀಕರಣ ಪೂರ್ಣಗೊಳ್ಳುವ ವೇಳೆಗೆ ನನ್ನ ನಟನೆ ಉತ್ತಮ ಗೊಳ್ಳಲಿದೆ ಮತ್ತು ನಾನು ಉತ್ತಮ ಮನುಷ್ಯನಾಗಿ ರೂಪುಗೊಳ್ಳುತ್ತೇನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
Role of a lifetime: Vivek Oberoi on playing PM Narendra Modi