ಸೋಲಿನ ಭೀತಿ ಎದುರಿಸುತ್ತಿದೆ ಕರ್ನಾಟಕ

ವಡೋದರಾ: ವಡೋದರಾ ವಿರುದ್ದದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ.
ವಡೋದರಾದಲ್ಲಿ ನಡೆಯುತ್ತಿರುವ ಬರೋಡಾ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಟಾಸ್ ಗೆದ್ದ ಕರ್ನಾಟಕ ತಂಡ ಪೆವಿಲಿಯನ್ ಪರೇಡ್ ನಡೆಸಿದೆ. ಮೊದಲ ದಿನದಾಟದ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಕರ್ನಾಟಕ ತಂಡ ಕೇವಲ 112 ರನ್‍ಗಳಿಗೆ ಆಲೌಟ್ ಆಯಿತು. ತಂಡದ ನಾಯಕ ಮನೀಶ್ ಪಾಂಡೆ (43), ಶರತ್ (30) ರನ್ ಕಲೆ ಹಾಕಿದ್ದು ಬಿಟ್ಟರೇ ಬೇರೆಲ್ಲಾ ಬ್ಯಾಟ್ಸ್‍ಮನ್‍ಗಳು ಬೇಗನೆ ಪೆವಿಲಿಯನ್ ಸೇರಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಬರೋಡಾ ತಂಡಕ್ಕೆ ಸೋಲಂಕಿ (69) ಮತ್ತು ಹೂಡಾ (51) ಅವರ ಅರ್ಧ ಶತಕದ ನೆರವಿನಿಂದ 223 ರನ್‍ಗಳಿಗೆ ಆಲೌಟ್ ಆಯಿತು. ಅದರೆ 111 ರನ್‍ಗಳ ಮುನ್ನಡೆ ಪಡೆದು ಮೊದಲ ಇನ್ನಿಂಗ್ಸ್‍ನಲ್ಲಿ ಮೇಲುಗೈ ಸಾಧಿಸಿತು. ದಿನದಾಟದ ಅಂತ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮನೀಶ್ ಪಡೆ 2 ವಿಕೆಟ್ ಕಳೆದುಕೊಂಡು 13 ರನ್‍ಗಳಿಸಿದೆ. ಕರುಣ್ ನಾಯರ್ ಅಜೇಯ 2 ಮತ್ತು ಸಿದ್ದಾರ್ಥ್ ಅಜೇಯ 11 ರನ್‍ಗಳಿಸಿ ಎರಡನೇ ದಿನಕ್ಕೆ ಕ್ರಿಸ್‍ಕಾಯ್ದಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ