ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿರ್ಮಾಪಕರ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನಿಂದ ಸ್ಟಾರ್ ನಟ ನಿರ್ಮಾಪಕರಿಗೆ ಐಟಿ ಡ್ರಿಲ್ ನಡೆಯಲಿದೆ.
ನಟ ನಿರ್ಮಾಪಕರ ಮನೆಯಲ್ಲಿ ಪತ್ತೆಯಾದ ಆಸ್ತಿ, ನಗದು ಚಿನ್ನಾಭರಣ, ದಾಖಲೆ ಇಲ್ಲದ ಆದಾಯ, ಹೂಡಿಕೆ ಇದರ ಸೂಕ್ತ ದಾಖಲೆಗಳನ್ನ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ಹಾಗೆ ಇಂದು ಕೆಲ ನಟ ನಿರ್ಮಾಪಕರು ಐಟಿ ಕಚೇರಿಗೆ ಬರುವ ಸಾಧ್ಯತೆ ಹೆಚ್ವಿದೆ. ಒಂದೇ ದಿನ ಐಟಿ ದಾಳಿಗೊಳಗಾದ 8ಜನರನ್ನ ವಿಚಾರಣೆ ನಡೆಸುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ವಾರಕ್ಕೆ ಒಬ್ಬೊಬ್ಬರನ್ನು ಕರೆಸಲು ನಿರ್ಧಾರ ಮಾಡಿದ್ದಾರೆ.
ಇಡಿಗೆ ಪತ್ರ?: ಮತ್ತೊಂದೆಡೆ ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆದಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಒಂದು ವೇಳೆ ಫೇಮಾ ವಂಚನೆ ಮಾಡಿದ್ದಲ್ಲಿ ಇಡಿ ಅಧಿಕಾರಿಗಳು ಐಪಿಸಿ 276ಸಿ(1),278 (ಡಿ)ಅಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಒಂದು ವೇಳೆ ಬೇನಾಮಿ ಆಸ್ತಿ ಹೊಂದಿರುವುದು ಸಾಬೀತಾದರೆ ಆಸ್ತಿ ನಿಯಂತ್ರಣ ಕಾಯ್ದೆಯಡಿ 7ವರ್ಷ ಜೈಲು ಶಿಕ್ಷೆ, ಭಾರಿ ಪ್ರಮಾಣದ ದಂಡ ನೀಡಬೆಕಾಗುತ್ತೆ. ಈ ಹಿನ್ನೆಲೆ ಇದೀಗ ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ನೀಡಲು ನಟ ನಿರ್ಮಾಪಕರು ಹರಸಹಾಸ ಪಡುತ್ತಿದ್ದಾರೆ.