ಬೆಂಗಳೂರು, ಜ.6- ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್ ವಿಚಾರಣೆ ಇಂದೂ ಸಹ ಮುಂದುವರೆದಿದೆ.
ವಿಧಾನಸೌಧ ಠಾಣೆ ಪೆÇಲೀಸರು ಆತನನ್ನು ಇಂದೂ ಸಹ ತೀವ್ರ ವಿಚಾರಣೆಗೆ ಒಳಪಡಿಸಿ ಹಣದ ಮೂಲದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ನಿನ್ನೆ ಕೂಡ ಪೆÇಲೀಸರು ವಿಚಾರಣೆ ನಡೆಸಿ ಆತ ಕೆಲಸ ಮಾಡುತ್ತಿದ್ದ ಸಚಿವರ ಕಚೇರಿಯ ಕೊಠಡಿ, ಹಣ ಸಿಕ್ಕಿದ ಸ್ಥಳವನ್ನು ಪರಿಶೀಲನೆ ಮಾಡಿದ್ದರು.
ಹಣವನ್ನು ಮೋಹನ್ಗೆ ಯಾರು, ಯಾವ ಕಾರಣಕ್ಕಾಗಿ ಕೊಟ್ಟರು ಎಂಬುದರ ಬಗ್ಗೆ ಪೆÇಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪ್ರಕರಣ ಎಸಿಬಿಗೆ:
ಈ ಪ್ರಕರಣವನ್ನು ಎಸಿಬಿಗೆ ವಹಿಸಲು ಬೆಂಗಳೂರು ನಗರದ ಪೆÇಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ. ನಾಳೆ ಈ ಪ್ರಕರಣ ಎಸಿಬಿಗೆ ವರ್ಗವಾಗುವ ನಿರೀಕ್ಷೆ ಇದೆ. ಹಣದ ವರ್ಗಾವಣೆ ಪ್ರಕರಣ ಇದಾಗಿರುವುದರಿಂದ ಎಸಿಬಿ ತನಿಖೆ ಸೂಕ್ತ ಎಂದು ಹಿರಿಯ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಮೋಹನ್ ದಾಖಲೆ ಇಲ್ಲದ 25.76 ಲಕ್ಷ ರೂ.ಗಳನ್ನು ಶುಕ್ರವಾರ ಸಂಜೆ ತೆಗೆದುಕೊಂಡು ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬಿದಿದ್ದರು.