ಸ್ವಾಮಿ ವಿವೇಕಾನಂದ ಅವರ ವೈಚಾರಿಕ ನಿಲವುಗಳು ಎಲ್ಲಾ ದರ್ಮದವರಿಗೂ ಮಾರ್ಗದರ್ಶನವಾಗಿದೆ, ಕೆಪಿಸಿಸಿ ಅಧ್ಯಕ್ಷ ಗುಂಡುರಾವ್

ಬೆಂಗಳೂರು, ಜ.6-ವಿವೇಕಾನಂದರ ವೈಚಾರಿಕ ನಿಲುವುಗಳು ಎಲ್ಲ ಧರ್ಮದವರಿಗೂ ಮಾರ್ಗದರ್ಶನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.
ನಗರದ ಪುರಭವನದಲ್ಲಿ ಸಂಕಲ್ಪ ಸಂಸ್ಥೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಹಾಗೂ ರಾಷ್ಟ್ರಕವಿ ಕುವೆಂಪು ಜಯಂತಿ  ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದ ಕ್ರಾಂತಿಕಾರಿ ಮಾತುಗಳು ನಮ್ಮ ಮಾನವೀಯ ಮೌಲ್ಯಗಳ  ಬದಲಾವಣೆಗೆ ಪ್ರೇರಕವಾಗಿವೆ. ಆದರೆ, ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರು ಹಿಂದೂ ಧರ್ಮದ ಮೌಲ್ಯಗಳನ್ನು ಗುರುತಿಸುವ ಜತೆಗೆ ಇತರೆ ದರ್ಮದ ಜನರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂದು ಪ್ರತಿಪಾದಿಸುತ್ತಿದ್ದರು ಎಂದು ಹೇಳಿದರು.

ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರಿಗೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯ, ವಿಶ್ವಶಾಂತಿ ಮತ್ತು ವಿವಿಧತೆಯಲ್ಲಿ ಏಕತೆ ಬಗ್ಗೆ ಮಾಡಿರುವ ಭಾಷಣದ ತುಣುಕನ್ನು ತಲುಪಿಸುವುದು ಅವಶ್ಯವಾಗಿದೆ ಎಂದರು.

ಯುವ ಪೀಳಿಗೆ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದ ಅವರು, ನಮ್ಮಲ್ಲಿರುವ ಜಾತಿ ತಾರತಮ್ಯ, ಕೋಮುದ್ವೇಶಗಳನ್ನು ಹೋಗಲಾಡಿಸಬೇಕಿದೆ. ವಿವೇಕಾನಂದರ ವೈಚಾರಿಕ ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಂಡು ದ್ವೇಷ ಬಿತ್ತುವ ಕಾರ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು ಕೇವಲ ದೇಶಪ್ರೇಮಿಯಾಗಿರದೆ ವಿಸ್ತಾರವಾದ ಯೋಚನೆಗಳುಳ್ಳ ದೇಶಾರಾಧಕರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಚಿಂತಕ ರಾಧಾಕೃಷ್ಣ, ಸಂಸ್ಥೆ ಅಧ್ಯಕ್ಷ ನಟರಾಜ್‍ಗೌಡ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಅದ್ದೆ, ಸೂರ್ಯ ಮುಕುಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ