ಬೆಂಗಳೂರು,ಜ.6-ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣಕ್ಕೂ, ಸಚಿವ ಪುಟ್ಟರಂಗ ಶೆಟ್ಟಿ ಅವರಿಗೂ ಸಂಬಂಧವಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಹಣ ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿ ವಿರುದ್ಧ ತನಿಖೆ ನಡೆಯುತ್ತಿದೆ, ಪೆÇಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಅದಕ್ಕೂ ಪುಟ್ಟರಂಗಶೆಟ್ಟಿ ಅವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಪುಟ್ಟರಂಗಶೆಟ್ಟಿ ಪರವಾಗಿ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ.
ಈ ಹಿಂದೆ ಕೋಟ್ಯಂತರ ರೂಪಾಯಿ ಹಣವನ್ನು ವಿಧಾನಸೌಧಕ್ಕೆ ತರಲಾಗುತ್ತಿತ್ತು. ಆ ರೀತಿ ಈಗ ನಡೆಯುವುದಿಲ್ಲ ಎಂಬ ಬಿಜೆಪಿಯವರ ಟೀಕೆಗಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಸರ್ಕಾರದಲ್ಲಿ ಯಾವ ಕಮೀಷನ್ ವ್ಯವಹಾರವೂ ನಡೆಯುತ್ತಿಲ್ಲ, ಭಣ್ರಷ್ಟಾಚಾರವೂ ಇಲ್ಲ. ಇದೇ ತಿಂಗಳ 8 ರಿಂದ ವಿಧಾನಸಭೆ ಅಧಿವೇಶನ ಕರೆಯಲಾಗುತ್ತಿದೆ. ಬಿಜೆಪಿಯವರು ಹೊರಗಡೆ ನಿಂತು ಟೀಕೆ, ಆರೋಪ ಮಾಡುತ್ತಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿ. ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದರು.
ಚಿತ್ರಸಂತೆಯಲ್ಲಿ ಭಾಗವಹಿಸಿ ಗಾಂಧಿ ಕುಟೀರ ಉದ್ಘಾಟಿಸಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಜಾತ್ರೆ. ಮನೆಗೊಂದು ಕಲಾಕೃತಿ ಇರಬೇಕು. ಸಂಜೆಯವರೆಗೂ ಚಿತ್ರಸಂತೆ ನಡೆಯುತ್ತಿರುತ್ತದೆ. ಬೆಂಗಳೂರಿನ ನಾಗರಿಕರು ಬಂದು ಕಲಾಕೃತಿಗಳನ್ನು ಖರೀದಿ ಮಾಡಿ ತೆಗೆದುಕೊಂಡು ಹೋಗಬೇಕು. ಇದು ಅದ್ಭುತವಾದ ಅವಕಾಶ. ಬಿ.ಎಲ್.ಶಂಕರ್ ಅವರು ದೇಶ-ವಿದೇಶಗಳಲ್ಲಿ ಚಿತ್ರಕಲೆ ಪೆÇ್ರೀ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.