ಮುಂಬೈ: ಬೆಂಗಳೂರು ಬುಲ್ಸ್ ತಂಡ ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ನಾಗಿ ಹೊರ ಹೊಮ್ಮಿದೆ.
ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‍ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಎದುರಾಳಿ ಗುಜರಾತ್ ಫಾಚ್ರ್ಯುನ್ ತಂಡವನ್ನ 38-33 ಅಂಕಗಳ ರೋಚಕ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಮೊದಲ ಬಾಗೆ ಚಾಂಪಿಯನ್ನಾಗಿ ಹೊರ ಹೊಮ್ಮಿತ್ತು.
ತಂಡದ ರೈಡರ್ ಪವನ್ ಸೆಹ್ರವಾತ್ ರೈಡಿಂಗ್‍ನಲ್ಲಿ 22 ಅಂಕಗಳನ್ನ ತಂದುಕೊಟ್ಟು ಗೆಲುವಿನ ರೂವಾರಿಯಾದರು. ಮೊದಲಾರ್ಧದಲ್ಲಿ ಗುಜರಾತ್ ತಂಡ ಏಳು ಅಂಕಗಳಿಂದ ಮುನ್ನಡೆ ಪಡೆದಿತ್ತು. ನಂತರ ರೈಡರ್ ಪವನ್‍ಸೊಗಸಾದ ರೈಡಿಂಗ್ ಮಾಡಿ ಪಂದ್ಯದ ಗತಿಯನ್ನ ಬದಲಿಸಿದರು.
2015ರ ಪ್ರೋ ಕಬಡ್ಡಿ ಲೀಗ್‍ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೊನೆಯ ಕ್ಷಣದಲ್ಲಿ ಯು ಮುಂಬಾ ವಿರುದ್ದ ಸೋಲು ಕಂಡು ನಿರಾಸೆ ಅನುಭವಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು.
ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಂಗಳೂರು ಬುಲ್ಸ್‍ಗೆ ಸಿಎಂ ಕುಮಾರ ಸ್ವಾಮಿ ಸೇರಿದಂತೆ ಅನೇಕ ಮಂದಿ ಅಭಿನಂದನೆಗಳನ್ನ ತಿಳಿಸಿದ್ದಾರೆ. ಬೆಂಗಳೂರು ಬುಲ್ಸ್ ಒಟ್ಟು 3 ಕೋಟಿ ರೂಪಾಯಿ ಬುಮಾನವನ್ನ ಗೆದ್ದುಕೊಂಡಿದೆ. ರನ್ನರ್‍ಅಪ್ ಗುಜರಾತ್ ಫಾಚ್ರ್ಯುನ್ಸ್ ತಂಡ 1.8 ಕೋಟಿ ರೂಪಾಯಿ ಪ್ರಶಸ್ತಿ ಪಡೆಯಿತು.