ಹೊಸದಿಲ್ಲಿ: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ೧೫-೨೦ನಿಮಿಷಗಳಿಗೂ ಮುನ್ನ ತಲುಪಿರಬೇಕೆಂಬ ನಿಯಮವಿರುವಂತೆ ಇನ್ನು ಮುಂದೆ ರೈಲು ನಿಲ್ದಾಣಗಳಲ್ಲಿ ಇದೇ ನಿಯಮಗಳನ್ನು ಜಾರಿಗೊಳಿಸಲು ರೈಲ್ವೇ ಇಲಾಖೆ ಯೋಜನೆ ರೂಪಿಸುತ್ತಿದೆ.
ಈ ಕುರಿತು ರೈಲ್ವೆ ಭದ್ರತಾ ಪಡೆ ಪ್ರಧಾನ ನಿರ್ದೇಶಕ ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದು, ಭದ್ರತಾ ತಪಾಸನೆ ಪ್ರಕ್ರಿಯೆ ಸಂಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿರೈಲು ಹೊರಡುವುದಕ್ಕಿಂತ ೧೫-೨೦ ನಿಮಿಷಗಳಿಗೆ ಮುನ್ನಪ್ರಯಾಣಿಕರು ರೈಲು ನಿಲ್ದಾಣಕ್ಕೆ ತಲುಪಿರಬೇಕೆಂಬ ನಿಯಮ ಜಾರಿಗೊಳಿಸಲು ನಿ‘ರಿಸಲಾಗಿದೆ ಎಂದಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿರುವಂತೆ ಪ್ರತಿಯೊಂದು ಪ್ರವೇಶ ದ್ವಾರಗಳಲ್ಲಿ ತಪಾಸನೆ ಇರುತ್ತದೆ. ಪ್ರಯಾಣಿಕರು ತಮ್ಮ ರೈಲಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅವಶ್ಯಕತೆ ಇಲ್ಲ. ಕೇವಲ ೧೫-೨೦ ನಿಮಿಷಗಳಿಗೆ ಮುಂಚಿತವಾಗಿ ನಿಲ್ದಾಣಕ್ಕೆ ತಲುಪಿದರೆ ಸಾಕು. ಆದರೆ ನಿಗತ ಸಮಯದಲ್ಲಿ ಪ್ರಯಾಣಿಕರು ತಲುಪದಿದ್ದರೆ ಅವರಿಗೆ ಪ್ರವೇಶ ನಿರ್ಬಂಸಲಾಗಿತ್ತದೆ ಎಂದು ಅವರು ಮಾಹಿತಿ ನೀಡಿದರು.
ಅಲಹಾಬಾದ್ ಕುಂಬಮೇಳಕ್ಕೆ ಮುಂಚಿತವಾಗಿ ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಕರ್ನಾಟಕದ ಹುಬ್ಬಳ್ಳಿ ರೈಲು ನಿಲ್ದಾಣ ಸೇರಿದಂತೆ ೨೦೨ ರೈಲು ನಿಲ್ದಾಣಗಳಲ್ಲಿ ಅತ್ಯುನ್ನತ ತಂತ್ರಜ್ಞಾನದ ಜತೆಗೆ ವಿವಿ‘ ‘ದ್ರತಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಕೆಲವೊಮ್ಮೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದರೆ ಸಿಬ್ಬಂದಿ ಕೊರತೆ ಕಂಡು ಬರುತ್ತದೆ. ಅದಕ್ಕಾಗಿಯೇ ಸಾ‘ವಾದಷ್ಟು ಮಾನವ ಶಕ್ರಿಯನ್ನು ಕಡಿಮೆಗೊಳಿಸಿವು ತಂತ್ರಜ್ಞಾನಗಳನ್ನು ಅಳವಡಿಸಲು ನಿ‘ರಿಸಲಾಗಿದೆ ಎಂದು ತಿಳಿಸಿದರು.
೨೦೨ ರೈಲು ನಿಲ್ದಾಣಗಳಲ್ಲಿ ಇಂಟಿಗ್ರೇಟೆಡ್ ಭದ್ರತಾ ವ್ಯವಸ್ಥೆ(ಐಎಸ್‌ಎಸ್)ಯನ್ನು ಜಾರಿಗೊಳಿಸಲಾಗಿದೆ. ಐಎಸ್‌ಎಸ್ ವ್ಯವಸ್ಥೆ ಸಿಸಿಟಿವಿ ಕ್ಯಾಮೆರಾ, ಆಕ್ಸೆಸ್ ಕಂಟ್ರೋಲ್, ವ್ಯಕ್ತಿ ಹಾಗೂ ಬ್ಯಾಗ್ ಸ್ಕ್ರೀನಿಂಗ್ ಮತ್ತು ಬಾಂಬ್ ಪತ್ತೆ ಹತ್ತುವ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ ಎಂದು ಅರುಣ್ ಕುಮಾರ್ ಸಂಪೂರ್ಣ ಮಾಹಿತಿ ನೀಡಿದರು.