ಜ.8 ಮತ್ತು 9ರಂದು ಕಾರ್ಮಿಕ ಸಂಘಗಳು ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲ ನೀಡುವಂತೆ ಮನವಿ ಮಾಡಿದ ಅಧ್ಯಕ್ಷೆ ವರಲಕ್ಷ್ಮಿ

Varta Mitra News

ಬೆಂಗಳೂರು, ಜ.5- ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ ಜ.8 ಮತ್ತು 9ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪೆರ್Çರೇಟ್ ಬಂಡವಾಳ ಶಾಹಿಗಳ ಪರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು, ಎಲ್ಲ ಕಾರ್ಮಿಕರಿಗೂ 18 ಸಾವಿರ ಮಾಸಿಕ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಯಾಗಬೇಕು, ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ಸೇರಿದಂತೆ ಹನ್ನೆರಡು ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರದ ವೇಳೆ ಒತ್ತಾಯಿಸಲಾಜಗುವುದು ಎಂದು ಹೇಳಿದರು.

ಮುಷ್ಕರಕ್ಕೆ ಕೆಎಸ್‍ಆರ್‍ಟಿಸಿ, ಆಟೋ ಸಂಘಟನೆ, ಸಾರ್ವಜನಿಕ ಕೈಗಾರಿಕೆಗಳು, ಗ್ರಾಮ ಪಂಚಾಯಿತಿ ನೌಕರರು, ಮುನ್ಸಿಪಲ್ ನೌಕರರು, ವಿವಿಧ ವಿಭಾಗಗಳಲ್ಲಿ ದುಡಿಯುವ ಗುತ್ತಿಗೆ ಕಾರ್ಮಿಕರು, ಪಾದಚಾರಿ ವ್ಯಾಪಾರಿಗಳು, ಹಮಾಲಿಗಳು ಎರಡು ದಿನಗಳ ಕಾಲ ಉತ್ಪಾದನೆ ಮತ್ತು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ. ಹಾಗಾಗಿ ಜನಸಾಮಾನ್ಯರು ಸಹಕರಿಸಬೇಕೆಂದು ವರಲಕ್ಷ್ಮಿ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಐಎನ್‍ಟಿಯುಸಿ ಮುಖಂಡ ಶಿವಣ್ಣ, ಅನಂತ್‍ಕುಮಾರ್, ವಿಜಯಕುಮಾರ್, ವಸಂತ ರೈ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ