ಡಾಲ್ಟನ್‍ಗಂಜ್(ಜಾರ್ಖಂಡ್), ಜ.5-ಜಾರ್ಖಂಡ್‍ನಲ್ಲಿ 2,391.36 ಕೋಟಿ ರೂ. ವೆಚ್ಚದ ಮಂಡಲ್ ಡ್ಯಾಂ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಿದರು.
ಪಲಮು ಮತ್ತು ಗವ್ರ್ಹಾ ಜಿಲ್ಲೆಗಳಲ್ಲಿ 19,604 ಹೆಕ್ಟೇರ್ ಪ್ರದೇಶಗಳಿಗೆ ನೀರಾವರಿ ಒದಗಿಸುವ ಮಂಡಲ್ ಆಣೆಕಟ್ಟು ಯೋಜನೆಗೆ ಮೋದಿ ಶಂಕುಸ್ಥಾಪನೆ ಮಾಡಿದರು.
ಇಲ್ಲಿ ಸಾರ್ವಜನಿಕ ರ್ಯಾಲಿಯೊಂದನ್ನು ಉದ್ದೇಶಿಸಿ ಭಾಷಣ ಮಾಡುವುದಕ್ಕೆ ಮುನ್ನ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಐವರು ಫಲಾನುಭವಿಗಳಿಗೆ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಿದರು.