ಬೆಂಗಳೂರು, ಜ.5-ಎಲ್ಲಾ ತೆರಿಗೆದಾರರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಎಂಬ ಸಂದೇಶ ಚಿತ್ರರಂಗದ ನಟರು ಹಾಗೂ ನಿರ್ಮಾಪಕರ ಮನೆಗಳ ಮೇಲೆ ನಡೆದಿರುವ ದಾಳಿಯಿಂದ ರವಾನೆಯಾಗಿದೆ ಎಂದು ಕಲಾವಿದ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಚಿತ್ರಕಲಾ ಪರಿಷತ್‍ನಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ಸಾಮಾನ್ಯ ಪ್ರಕ್ರಿಯೆ.
ಸಿನಿಮಾರಂಗದವರು, ಉದ್ಯಮಿಗಳು, ರಾಜಕಾರಣಿಗಳ ಮನೆಗಳ ಮೇಲೆ ಕಾಲ ಕಾಲಕ್ಕೆ ದಾಳಿ ನಡೆಯುತ್ತದೆ.ಈ ಬಾರಿ ಸ್ಟಾರ್ ನಟರ ಮನೆಗಳ ಮೇಲೆ ನಡೆದಿರುವ ದಾಳಿಯಿಂದಾಗಿ ಹೆಚ್ಚು ಗಮನ ಸೆಳೆದಿದೆ.ಇಂತಹ ದಾಳಿಯಿಂದ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಸಂದೇಶ ರವಾನೆಯಾದಂತಾಗಿದೆ ಎಂದರು.
ನಟರು ಹಾಗೂ ನಿರ್ಮಾಪಕರು ತಮ್ಮ ಎಲ್ಲಾ ಲೆಕ್ಕ ಪತ್ರಗಳನ್ನು ವ್ಯವಸ್ಥಿತವಾಗಿ ಇಟ್ಟಿದ್ದಾರೆ.ಅದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದಾರೆ ಎಂಬ ನಂಬಿಕೆ ನನಗಿದೆ. ಇದರಲ್ಲಿ ಆತಂಕಪಡುವ ಅಗತ್ಯವಿಲ್ಲ. ಮಾರ್ಚ್ ಟ್ಯಾಕ್ಸ್ ರಿಟರ್ನ್ ತಿಂಗಳಾಗಿರುವ ಹಿನ್ನೆಲೆಯಲ್ಲಿ ಇದೊಂದು ಎಚ್ಚರಿಕೆಯ ಘಂಟೆಯಾಗಿದೆ. ಎಲ್ಲರೂ ಅಕೌಂಟ್ ಸರಿಯಾಗಿ ನಿರ್ವಹಣೆ ಮಾಡಬೇಕಿದೆ ಎಂದರು.
ಈ ದಾಳಿ ಹಿಂದೆ ರಾಜಕೀಯವಿದೆ ಎನಿಸುತ್ತಿಲ್ಲ. ಕೆಲವೇ ಕೆಲವರನ್ನು ಗುರಿಯಾಗಿಸಿ ದಾಳಿ ನಡೆದಿದೆ ಎನ್ನಲಾಗುವುದು.ಇದು ಇಲಾಖೆ ಕೆಲಸ. ಊಹಾಪೊಹ ಬಗ್ಗೆ ನನಗೆ ಗೊತ್ತಿಲ್ಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.