ನಿನ್ನೆ ಸಿಡ್ನಿಯಲ್ಲಿ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಪಂದ್ಯದಲ್ಲಿ ದೊಡ್ಡ ಹೈಲೆಟ್ ಅಂದ್ರೆ ಅದು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ. ಮೊದಲ ಎರಡು ದಿನ ಆಸಿಸ್ ಬೌಲರ್ಗಳನ್ನ ಚೆಂಡಾಡಿದ ಚೇತೇಶ್ವರ ಪೂಜಾರ ದ್ವೀಶತಕದಿಂದ ವಂಚಿತರಾಗಿ ನಿರಾಸೆಯಿಂದ ಪೆವಿಲಿಯನ್ ಸೇರಿದ್ರು.
ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ ಆಸಿಸ್ ಬೌಲರ್ಗಳನ್ನ ಚೆಂಡಾಡಿದ್ದ ಚೇತೇಶ್ವರ ಪೂಜಾರ ಎರಡನೇ ದಿನದಾಟದ ಪಮದ್ಯದಲ್ಲೂ ಆಸಿಸ್ ಬೌಲರ್ಗಳನ್ನ ಗೋಳೊಯ್ದುಕೊಂಡ್ರು. ಮೊದಲ ದಿನದಾಟದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪೂಜಾರ ದಿನದಾಟದ ಅಂತ್ಯದಲ್ಲಿ ಅಜೇಯ 130 ರನ್ ಗಳಿಸಿದ್ರು.
ಎರಡನೇ ದಿನವೂ ಆಸಿಸ್ ಬೌಲರ್ಗಳನ್ನ ಚೆಂಡಾಡಿದ ಪೂಜಾರ :ಅಜೇಯ 130 ರನ್ ಗಳಿಸಿದ್ದ ಪೂಜಾರ ಆಲ್ರೌಂಡರ್ ಪೂಜಾರ ಜೊತೆ ದಿನದಾಟ ಆರಂಭಿಸಿದ್ರು. 182 ಎಸೆತದಲ್ಲಿ 150 ರನ್ಗಳಿಸಿದ ಪೂಜಾರ ಮತ್ತೆ ತಮ್ಮ ಬ್ಯಾಟಿಂಗ್ ವೈಭವನ್ನ ಮುಂದುವರೆಸಿದ್ರು.
ಲಿಯಾನ್ರಿಂದ ಜೀವದಾನ ಪಡೆದಿದ್ದ ಪೂಜಾರ: ಚೇತೇಶ್ವರ ಪೂಜಾರ 192 ರನ್ ಗಳಿಸಿದ್ದಾಗ ಒಂದು ಜೀವದಾನ ಪಡೆದಿದ್ರು. 126ನೇ ಓವರ್ನ ಎರಡನೇ ಎಸೆತದಲ್ಲಿ ಪೂಜಾರ ಬೌಂಡರಿ ಬಾರಿಸಲು ಹೋಗಿ ಸ್ಲಿಪ್ನಲ್ಲಿದ್ದ ಉಸ್ಮಾನ್ ಖ್ವಾಜಾಗೆ ಕ್ಯಾಚ್ ನೀಡಿದ್ರು. ಆದ್ರೆ ಸ್ಲಿಪ್ ಫೀಲ್ಡರ್ ಖ್ವಾಜಾ ಕ್ಯಾಚ್ನ್ನ ಕೈಚೆಲ್ಲಿ ಜೀವದಾನ ನೀಡಿದ್ರು.
193 ರನ್ಗಳಿಸಿ ಚೇತೇಶ್ವರ ಪೂಜಾರ ಔಟ್ :ಒಂದು ಜೀವದಾ ಪಡೆದಿದ್ದ ಚೇತೇಶ್ವರ ಪೂಜಾರ ದ್ವಿಶತಕದ ಅಂಚಿನಲ್ಲಿ ಮ್ತತೆ ಎಡವಿದ್ರು. 130ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಸ್ಪಿನ್ನರ್ ನಾಥನ್ ಲಿಯಾನ್ ನಿಧಾನಗತಿಯಲ್ಲಿ ಚೆಂಡನ್ನ ಎಸದರು. ಚೆಂಡನ್ನ ಸರಿಯಾಗಿ ಗ್ರಹಿಸದ ಪೂಜಾರ ಲೆಗ್ ಸೈಡ್ನತ್ತೆ ಚೆಂಡನ್ನಬಾರಿಸಲು ಹೋಗಿ ನಾಥನ್ ್ಲಿಯಾನ್ಗೆ ಕಾಟ್ ಅಂಡ್ ಬೌಲ್ಡ್ ಆದ್ರು.
ಇದರೊಂದಿಗೇ ಚೇತೇಶ್ವರ ಪೂಜಾರ ದ್ವೀಶತಕ ಬಾರಿಸದೇ ನಿರಾಸೆ ಅನುಭವಿಸಿದ್ರು. ಚೇತೇಶ್ವರ ಪೂಜಾರ ಒಟ್ಟು 373 ಎಸೆತ ಎದುರಿಸಿ 22 ಬೌಂಡರಿಗಳೊಂದಿಗೆ 193 ರನ್ ಕಲೆ ಹಾಕಿದ್ರು.
ಆಸಿಸ್ ನೆಲದಲ್ಲಿ ಅತಿ ಹೆಚ್ಚು ಎಸೆತ ಎದುರಿಸಿದ ಮೊದಲ ಬ್ಯಾಟ್ಸ್ಮನ್ :ಯಸ್..ಟೀಮ್ ಇಂಡಿಯಾದ ನ್ಯೂ ವಾಲ್ ಎಂದೇ ಕರಸಿಕೊಳ್ಳುತ್ತಿರುವ ಸೌರಾಷ್ಟ್ರ ಬ್ಯಾಟ್ಸ್ಮನ್ ಪೂಜಾರ, ಪ್ರಸಕ್ತ ಸರಣಿಯಲ್ಲಿ ಆಡಿರುವ 4 ಪಂದ್ಯಗಳ 5 ಇನಿಂಗ್ಸ್ಗಳಲ್ಲಿ ಒಟ್ಟು 1204 ಎಸೆತಗಳನ್ನ ಎದುರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ನಡೆದಿರುವ ಟೆಸ್ಟ್ ಸರಣಿ ಒಂದರಲ್ಲಿ ಆತಿಥೇಯರ ಎದುರು ಅತಿ ಹೆಚ್ಚು ಎಸೆತಗಳನ್ನ ಎದುರಿಸಿದ ಭಾರತದ ಬ್ಯಾಟ್ಸ್ಮನ್ ಎನ್ನುವ ದಾಖಲೆ ಬರೆದಿದ್ದಾರೆ.
ಪೂಜಾರ ದ್ವಿಶತಕದಿಂದ ವಂಚಿತರಾಗಿದ್ರು ಇಡೀ ಕ್ರಿಕೆಟ್ ದುನಿಯಾ ಪೂಜಾರ ಆಟಕ್ಕೆ ಸಲಾಂ ಹೊಡೆದಿದೆ.