2000 ರೂ ಮುಖಬೆಲೆಯ ನೋಟುಗಳು ಸಾಕಷ್ಟಿರುವುದರಿಂದ ಹೆಚ್ಚುವರಿ ನೋಟು ಮುದ್ರಣವಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: 2000 ಮುಖ ಬೆಲೆಯ ನೋಟುಗಳು ಸಾಕಷ್ಟು ಚಾಲ್ತಿಯಲ್ಲಿರುವುದರಿಂದ ಮತ್ತೊಮ್ಮೆ ಹೆಚ್ಚುವರಿ ನೋಟುಗಳನ್ನು ಮುದ್ರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಗತ್ಯಕ್ಕೆ ತಕ್ಕಂತೆ ನೋಟುಗಳನ್ನು ಮುದ್ರಿಸಲಾಗುತ್ತದೆ. ಸದ್ಯ ಆರ್ಥಿಕ ವ್ಯವಸ್ಥೆಯಲ್ಲಿ 2000 ಮುಖ ಬೆಲೆ ನೋಟುಗಳು 35% ರಷ್ಟು ಇದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್​ ಚಂದ್ರ ಗರಗ್​ ತಿಳಿಸಿದ್ದಾರೆ.

2 ಸಾವಿರ ಮುಖ ಬೆಲೆಯ ಹೊಸ ನೋಟುಗಳು ಇನ್ನು ಮುಂದೆ ಮುದ್ರಣಗೊಳ್ಳುವುದಿಲ್ಲ ಎಂಬ ವಿಷಯಗಳು ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಗರಗ್, 2000 ನೋಟುಗಳು ವ್ಯವಸ್ಥೆಯಲ್ಲಿ ಸಾಕಷ್ಟು ಚಾಲ್ತಿ ಇವೆ. ಹೀಗಾಗಿಯೇ ಮತ್ತಷ್ಟು ಉತ್ಪಾದನೆ ಮಾಡುವ ಪ್ರಮೇಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಮಾತನಾಡಿದ್ದ ಆರ್​ಬಿಐ ಅಧಿಕಾರಿಯೊಬ್ಬರು ನೋಟು ಮುದ್ರಣದ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಿದ್ದರು.

No Decision On Printing Rs. 2000 Notes, Have Adequate In System: Official

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ