ಸಿಡ್ನಿ: ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರ 193 ರನ್ ಹಾಗೂ ರಿಷಭ್ ಪಂತ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್‍ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಎರಡನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಚೇತೇಶ್ವರ ಪೂಜಾರ 193ರನ್ ಗಳಿಸಿ ದ್ವಿಶತಕದ ಅಂಚಿನಲ್ಲಿ ಎಡವಿದ್ರು. ಹನುಮ ವಿಹಾರಿ 42 ರನ್‍ಗಳಿಸಿ ವಿವಾದತ್ಮಕವಾಗಿ ಔಟ್ ಆದ್ರು.
ನಂತರ ಆರನೆ ವಿಕೆಟ್‍ಗೆ ಬಂದ ರಿಷಭ್ ಪಂತ್ ಅಸಿಸ್ ಬೌಲರ್‍ಗಳ ಬೆವರಿಳಿಸಿದ್ರು. ರಿಷಭ್ ಪಂತ್ 137 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದ್ರು. ಇವರಿಗೆ ಉತ್ತಮ ಸಾಥ್ ಕೊಟ್ಟ ರವೀಂದ್ರ ಜಡೇಜಾ 81 ರನ್‍ಗಳಿಸಿದ್ರು. ರಿಷಭ್ ಪಂತ್ 189 ಎಸೆತ ಎದುರಿಸಿ 15 ಬೌಂಡರಿ 1 ಸಿಕ್ಸರ್ ಬಾರಿಸಿ ಅಜೇಯ 159 ರನ್‍ಗಳಿಸಿದ್ರು. ಕೊನೆಗೆ ನಾಯಕ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ರು. ಆಸಿಸ್ ಪರ ನಾಥಾನ್ ಲಿಯಾನ್ 4 ವಿಕೆಟ್ ಪಡೆದು ಮಿಂಚಿದ್ರು.