ಪ್ರಧಾನಿ ಮೋದಿಗೆ ಇಂದು ಪರೀಕ್ಷೆ, ಸಂಸತ್ತೇ ಪರೀಕ್ಷಾ ಕೊಠಡಿ, ರಾಹುಲ್ ಗಾಂಧಿಯೇ ಮೇಲ್ವಿಚಾರಕ !

ನವದೆಹಲಿ: ರಫೇಲ್​ ವಿವಾದದ ಕುರಿತಾಗಿ ಇಂದಿನ ಸಂಸತ್​ ಅಧಿವೇಶನದಲ್ಲಿಯೂ ವಾಗ್ಯುದ್ಧ ನಡೆಯುವ ಸೂಚನೆಯನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನೀಡಿದ್ದಾರೆ. ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ರಫೇಲ್​ನ ತೆರೆದ ಪುಸ್ತಕದ ಪರೀಕ್ಷೆಯನ್ನು ಎದುರಿಸಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಡೀಲ್​ ಕುರಿತಾಗಿ  ಪ್ರಧಾನಿ ಮೋದಿ ಅವರಿಗೆ ತೆರೆದ ಪುಸ್ತಕದ ಪರೀಕ್ಷೆ ನಡೆಯಲಿದೆ. ಅದರಲ್ಲಿ 126 ಯುದ್ಧ ವಿಮಾನಗಳ ಬದಲಾಗಿ 36 ಯುದ್ಧ ವಿಮಾನಗಳಿಗೆ ಒಪ್ಪಂದ ನೀಡಿದ್ದೇಕೆ? ಪ್ರತಿ ಹೆಲಿಕಾಪ್ಟರ್​ಗೆ 560 ಕೋಟಿ ಬದಲಾಗಿ ಹೆಚ್ಚುವರಿಯಾಗಿ 1600 ಕೋಟಿ ನೀಡಿದ್ದೇಕೆ? ಹೆಚ್​ಎಎಲ್​ ಬದಲಾಗಿ ಎಎ (ಅನಿಲ್​ ಅಂಬಾನಿ) ಆಯ್ಕೆ ಮಾಡಿದ್ದೇಕೆ?  ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಧಾನಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.  ಟ್ವೀಟ್​ ಮೂಲಕ ಮತ್ತೊಂದು ಪ್ರಶ್ನೆ ಹಾಕಿರುವ ರಾಗಾ, ಗೋವಾ ಸಿಎಂ ಪರಿಕ್ಕರ್​ ಏಕೆ ರಫೇಲ್​ ಡೀಲ್​ ಫೈಲ್​ಗಳನ್ನು ತಮ್ಮ ಬೆಡ್​ ರೂಂನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಧಾನಿಗಳು ದಯಮಾಡಿ ಉತ್ತರಿಸಿ ಎಂದು ಕಿಚಾಯಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಈ ಮೂಲಕ ಕುಟುಕಿರುವ ರಾಹುಲ್​, ಈ ಎಲ್ಲಾ ಪ್ರಶ್ನೆಗಳಿಗೆ ಮೋದಿ ಸಂಸತ್​ನಲ್ಲಿ ಉತ್ತರಿಸಬೇಕಿತ್ತು. ಆದರೆ ಆ ಧೈರ್ಯವಿಲ್ಲದೆ ಅವರ ಕೋಣೆಯಲ್ಲಿ ಅಡಗಿ ಕೂತಿದ್ದಾರೆ ಎಂದಿದ್ದಾರೆ. ಅಲ್ಲದೆ ಪರಿಕ್ಕರ್​ ರಫೇಲ್​ ಡೀಲ್​ನ ಫೈಲ್​ಗಳು ತನ್ನ ಬಳಿ ಇವೆ ಎನ್ನುವ ಮೂಲಕ ಪ್ರಧಾನಿಗೆ ಬ್ಲಾಕ್​ಮೇಲ್​​ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ