ಟೀಂ ಇಂಡಿಯಾ ಓಪನರ್ ಕನ್ನಡಿಗ ಕೆ.ಎಲ್. ರಾಹುಲ್ ಗೆ ಮತ್ತೆ ಅದೃಷ್ಟ ಒಲಿದು ಬಂದಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ಹೊರತಾಗಿಯೂ ಆಸಿಸ್ ವಿರುದ್ಧ ಇಂದಿನಿಂದ ಆರಂಭವಾಗಿರುವ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಕದನದಲ್ಲಿ ಚಾನ್ಸ್ ಪಡೆದಿದ್ದಾರೆ.
ರೋಹಿತ್ ಶರ್ಮಾ ಪುತ್ರಿಯಿಂದ ರಾಹುಲ್ಗೆ ಸಿಕ್ತು ಅದೃಷ್ಟ..!
ಟೆಸ್ಟ್ ಫಾರ್ಮೆಟ್ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಮೆಲ್ಬೋರ್ನ್ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ರು. ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ರೋಹಿತ್ ತಮ್ಮ ಮಗುವನ್ನು ನೋಡಲು ಮುಂಬೈಗೆ ತೆರಳಿದ್ದಾರೆ. ರೋಹಿತ್ ಶರ್ಮಾಗೆ ಅದೃಷ್ಟ ದೇವತೆ ಜನಿಸಿದ್ದಾಳೆ. ಬರೀ ರೋಹಿತ್ಗೆ ಮಾತ್ರವಲ್ಲ ರಾಹುಲ್ಗೂ ರೋಹಿತ್ ಅದೃಷ್ಟ ದೇವತೆಯಾಗಿದ್ದಾಳೆ. ರೋಹಿತ್ ಭಾರತಕ್ಕೆ ಮರಳಿರೋದ್ರಿಂದ ರಾಹುಲ್ ರೋಹಿತ್ ಸ್ಥಾನವನ್ನ ರಿಪ್ಲೇಸ್ ಮಾಡಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್ ಕಳೆದ ಒಂದು ವರ್ಷದಿಂದ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಪರ್ಫಾಮನ್ಸ್ ನೀಡುತ್ತಾ ಬಂದಿದ್ದಾರೆ. ಸೌತ್ ಆಫ್ರಿಕಾ, ಇಂಗ್ಲೆಂಡ್ ಸರಣಿಗಳಲ್ಲಿ ಫ್ಲಾಪ್ ಪರ್ಫಾಮನ್ಸ್ ಕೊಟ್ಟಿದ್ರು. ಹೀಗಿದ್ದು ರಾಹುಲ್ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ರು. ಆದ್ರೆ ಕಾಂಗರೂ ನಾಡಲ್ಲೂ ರಾಹುಲ್ ವೈಫಲ್ಯ ಮುಂದುವರೆದಿದೆ.
ಆಸಿಸ್ ವಿರುದ್ಧ ರಾಹುಲ್ ಸಾಧನೆ
ಪಂದ್ಯ – 2
ರನ್ – 48
ಸ್ಟ್ರೈಕ್ ರೇಟ್ – 11.76
ಕನ್ನಡಿಗ ಕೆ.ಎಲ್. ರಾಹುಲ್ ಆಸಿಸ್ ಈ ಬಾರಿಯ ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳಿಂದ ಒಟ್ಟು 48 ರನ್ ಗಳಿಸಿದ್ದು ಕೇವಲ 11.76 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಕನ್ನಡಿಗ ರಾಹುಲ್ಗೆ ಇದು ಲಾಸ್ಟ್ ಚಾನ್ಸ್..!
ಸತತ ವೈಫಲ್ಯ ಅನುಭವಿಸಿರುವ ಕೆ.ಎಲ್. ರಾಹುಲ್ಗೆ ಇದು ಲಾಸ್ಟ್ ಚಾನ್ಸ್ ಆಗಿದೆ. ತಂಡದ ಓಪನರ್ರಾಗಿ ರಾಹುಲ್ ಎಡವುತ್ತಿರೋದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತಿದೆ. ಸಿಡ್ನಿಯಲ್ಲಿ ಕೆ.ಎಲ್. ರಾಹುಲ್ ಮತ್ತೆ ಎಡವಿದ್ರೆ ಮುಂಬರುವ ಆಸಿಸ್ ವಿರುದ್ಧ ಏಕದಿನ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಿಂದ ಗೇಟ್ ಪಾಸ್ ಸಿಗಲಿದೆ.
ಸಿಡ್ನಿ ಅಂಗಳದಲ್ಲಿ ಸೆಂಚುರಿಸಿ ಬಾರಿಸಿದ್ದ ರಾಹುಲ್
ರಾಹುಲ್ಗೆ ಸಿಡ್ನಿ ಪಂದ್ಯಕ್ಕೆ ಅವಕಾಶ ಕೊಡಲು ಒಂದು ಕಾರಣವಿದೆ. ಅದೇನೆಂದ್ರೆ ಕೆ.ಎಲ್. ರಾಹುಲ್ ನಾಲ್ಕು ವರ್ಷಗಳ ಹಿಂದೆ ಆಸಿಸ್ ಟೆಸ್ಟ್ ಸರಣಿ ಮೂಲಕ ಟೆಸ್ಟ್ ಡೆಬ್ಯೂ ಮಾಡಿದ್ರು. ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಫ್ಲಾಪ್ ಆಗಿದ್ರು. ಆದ್ರೆ ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಜೊತೆ ಭರ್ಜರಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ್ರು.
ಅಂದು ರಾಹುಲ್ ಶತಕ ಬಾರಿಸಿ ಡೆಬ್ಯು ಸರಣಿಯಲ್ಲಿ ಹಲವಾರು ದಾಖಲೆಗಳನ್ನ ಮುಡಿಗೇರಿಸಿಕೊಂಡಿದ್ರು. ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 262 ಎಸೆತ ಎದುರಿಸಿ 1 ಸಿಕ್ಸರ್ ಸೇರಿದಂತೆ 13 ಬೌಂಡರಿ ಬಾರಿಸಿ ಒಟ್ಟು 147 ರನ್ ಗಳಿಸಿ ಶೈನ್ ಆಗಿದ್ರು.
ಇದೇ ಶತಕ ಕೆ.ಎಲ್. ರಾಹುಲ್ಗೆ ಮತ್ತೆ ಅವಕಾಶ ಸಿಗುವಂತೆ ಮಾಡಿದೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿಗೆ, ರಾಹುಲ್ ಮೇಲೆ ನಂಬಿಕೆ ಇದ್ದು ಮತ್ತೆ ಅವಕಾಶ ಕೊಟ್ಟಿದ್ದಾರೆ.ಈ ಅವಕಾಶವನ್ನ ರಾಹುಲ್ ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಅನ್ನೋದರ ಮೇಲೆ ರಾಹುಲ್ ಭವಿಷ್ಯಾ ನಿಂತಿದೆ.