ಚಂದ್ರನ ಮೇಲೆ ‘ಚಾಂಗ್ ಇ- 4’ ಬಾಹ್ಯಾಕಾಶ ನೌಕೆ ಯಶಸ್ವೀ ಲ್ಯಾಂಡ್

ಬೀಜಿಂಗ್: ಚೀನಾ ಇದೇ ಮೊದಲ ಬಾರಿಗೆ ಚಂದ್ರನ ಮೇಲೆ ‘ಚಾಂಗ್ ಇ- 4’ ಬಾಹ್ಯಾಕಾಶನೌಕೆಯನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದೆ.

ಚಂದ್ರನ ಅಂಗಳದಲ್ಲಿ ನೆಲೆ ಸ್ಥಾಪಿಸಲು ಚೀನಾ ‘ಚಾಂಗ್ ಇ- 4’ ಯೋಜನೆ ರೂಪಿಸಿದ್ದು, ಈ ಯೋಜನೆಯ ವಿಶೇಷವೆಂದರೆ, ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗು ಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಿ ಆ ಪಾರ್ಶ್ವದ ಅಧ್ಯಯನ ಮಾಡುವುದಾಗಿದೆ.

‘ಚಾಂಗ್ ಇ- 4’ ಚಂದ್ರನ ಮೇಲೆ ಇಳಿದ ತಕ್ಷಣ ಭೂಮಿಗೆ ಫೋಟೋವೊಂದನ್ನು ರವಾನಿಸಿದ್ದು, ಅದನ್ನು ಕ್ಸಿನ್ಹುಆ ಸುದ್ದಿ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

‘ಚಾಂಗ್ ಇ- 4’ ಬೆಳಗ್ಗೆ 10.30ಕ್ಕೆ ಚಂದ್ರನ ಮೇಲೆ ಇಳಿದಿದ್ದು, ಇದನ್ನು ಸರ್ಕಾರಿ ಮಾಧ್ಯಮ ಚೀನಾ ಸೆಂಟ್ರಲ್ ಟಿವಿಯಲ್ಲಿ ಪ್ರಕಟಿಸಲಾಗಿದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ತಿಳಿಸಿದೆ.

ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಯೋಜನೆಗೆ ಚೀನಾ ಕೈ ಹಾಕಿದೆ.

Chinese spacecraft, Chang’e 4, lands on moon

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ