ಮೈಸೂರು, ಜ.2- ಧಾರ್ಮಿಕ ಭಾವನೆಗಳ ಕುರಿತ ವಿಚಾರಗಳನ್ನು ನ್ಯಾಯಾಲಯಗಳಿಗೆ ಕೊಂಡೊಯ್ಯಬಾರದು ಎಂದು ಸಾಹಿತಿ ಎಸ್.ಎಲ್.ಬೈರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದಂತಹ ವಿಚಾರಗಳು ನಂಬಿಕೆಗಳ ಪ್ರಶ್ನೆ.ಇಂತಹ ಧಾರ್ಮಿಕ ವಿಚಾರಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಾರದು ಎಂದರು.
ಜನರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಬೇಕು ಎಂದ ಅವರು, ಶಬರಿಮಲೆ ಕುರಿತಂತೆ ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರು ಮಹಿಳಾ ನ್ಯಾಯಮೂರ್ತಿಯೂ ಇದ್ದರು. ಅವರು ದೇಗುಲ ಪ್ರವೇಶವನ್ನು ವಿರೋಧಿಸಿದ್ದರು ಎಂದು ಹೇಳಿದರು.
ಚಾಮುಂಡೇಶ್ವರಿ ಹೆಣ್ಣು ದೇವರು.ಆಕೆ ಮಹಿಷಾಸುರನನ್ನು ಮರ್ಧನ ಮಾಡುವಾಗ ಗಂಡು ದೇವರು ಸಹಕಾರ ನೀಡಿದ್ದರು.ಇದರಿಂದಾಗಿ ಗಂಡಸರಿಗೆ ಅವಮಾನವಾಗಿದೆ ಎಂದು ಕೋರ್ಟ್ಗೆ ಹೋದರೆ ಏನು ತೀರ್ಪು ಬರುತ್ತದೆ ಎಂದು ಪ್ರಶ್ನಿಸಿದರು.