ಟಿಮ್‍ಪೇನ್ ಮನೆಗೆ ಭೇಟಿಕೊಟ್ಟು ಕಿಚಾಯಿಸಿದ್ರಾ ರಿಷಭ್ ಪಂತ್?

ಸಿಡ್ನಿ: ಮೊನ್ನೆ ಮುಕ್ತಾಯವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ವಿವಾದದ ವಿಷಯವೆಂದರೆ ಅದು ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಆಸಿಸ್ ನಾಯಕ ಟಿಮ್ ಪೇನ್ ಪರಸ್ಪರ ಸ್ಲೆಡ್ಜಿಂಗ್ ಮಾಡಿಕೊಂಡಿದ್ರು.

ಮೈದಾನದಲ್ಲಿ ಇವರಿಬ್ಬರ ಗಲಾಟೆ ಸಾಕಷ್ಟು ಕಾವೇರಿತ್ತು. ಅಸಿಸ್ ಟಿಮ್ ಪೇನ್ ಮೂರನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಿಷಭ್ ಪಂತ್‍ಗೆ ನಮ್ಮ ಮನೆಗೆ ಊಟಕ್ಕೆ ಬಾ, ನಾನು ನನ್ನ ಹೆಂಡತಿ ಸಿನಿಮಾ ನೋಡಲು ಹೋಗುತ್ತೇವೆ. ನನ್ನ ಮಕ್ಕಳನ್ನ ನೋಡಿಕೊಂಡಿರು ಎಂದು ಕಿಚಾಯಿಸಿದ್ರು.

ನಂತರ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಸೇಡಿಗಾಗಿ ಕಾದು ಕುಳಿತ್ತಿದ್ದ ರಿಷಭ್ ಪಂತ್ ಎರಡನೇ ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಟಿಮ್ ಪೇನ್‍ಗೆ ನೀವೆಲ್ಲದರೂ ತಾತ್ಕಾಲಿಕ ನಾಯಕನನ್ನ ನೋಡಿದ್ದೀರಾ ಎಂದು ಹೇಳಿ ಕಾಲೆಳೆದಿದ್ದರು.

ಆದರೆ ಇದೀಗ ರಿಷಭ್ ಟಿಮ್ ಪೇನ್ ಕಾಲೆಳೆಯಲು ಹೊಸ ವರ್ಷದಂದು ಟಿಮ್ ಪೇನ್ ಮನೆಗೆ ಭೇಟಿ ಕೊಟ್ಟು ಪೇನ್ ಪತ್ನಿ ಬೋನಿ ಪೇನ್ ಮತ್ತು ಮಕ್ಕಳೊಂದಿಗೆ ಕೆಲವೊತ್ತು ಸಮಯ ಕಳೆದು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ರಿಷಭ್ ಪಂತ್ ತಮ್ಮ ಮನೆಗೆ ಭೇಟಿ ನೀಡಿರುವ ಕುರಿತು ಸ್ವತಃ ಪೇನ್ ಪತ್ನಿ ಬೋನಿ ಪೇನ್ ಇನ್ಸಾಟಾಗ್ರಾಂನಲ್ಲಿ ಬರೆದುಕೊಂಡು ರಿಷಭ್ ಪಂತ್‍ಗೆ ಬೇಬಿ ಸಿಟ್ಟರ್ ಎಂದು ಕಿಚಾಯಿಸಿದ್ದಾರೆ.

ರಿಷಭ್ ಪಂತ್ ಮೈದಾನದ ವೈರತ್ವವನ್ನೆಲ್ಲ ಬಿಟ್ಟು ಪೇನ್ ಮನೆಗೆ ಭೇಟಿಕೊಟ್ಟು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ