ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ನೀಡಿರುವ ಒಂದು ದಿನದ ವೇತನ ಸರಿಯಾಗಿ ಸದ್ಬಳಕೆಯಾಗಬೇಕು ಎಂದು ಅಗ್ರಹಿಸಿದ ಶಾಲಾ ಶಿಕ್ಷಕರ ಸಂಘ

ಧಾರವಾಡ, ಜ.2- ಇದೇ ಜನವರಿ 4ರಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರು ನೀಡಿರುವ ಒಂದು ದಿನದ ವೇತನ ಸಂಪೂರ್ಣವಾಗಿ ಸದ್ಬಳಕೆಯಾಗಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ಜುಬಾರೆ ಪತ್ರಿಕಾ ಹೇಳಿಕೆ ನೀಡಿ ಸಾಹಿತ್ಯ ಸಮ್ಮೇಳನಕ್ಕೆ ನೌಕರರ ರಾಜ್ಯ ಸರ್ಕಾರಿ ನೌಕರರ ಸಂಘವು ಒಂದು ದಿನದ ವೇತನ ನೀಡಿದ್ದು, ಅರ್ಧದಷ್ಟು ಹಣವನ್ನು ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಬೇಕೆಂದು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಸಂಘ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಿದ್ದನ್ನು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಜಿಲ್ಲಾ ಘಟಕ ವಿರೋಧಿಸಿದೆ.

ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ನೌಕರರು ನೀಡಿರುವ ಒಂದು ದಿನದ ವೇತನ ಸಮ್ಮೇಳನಕ್ಕೆ ಸಂಪೂರ್ಣ ಬಳಕೆಯಾಗಬೇಕು.ಅರ್ಧದಷ್ಟು ಹಣ ಕಟ್ಟಡ ನಿರ್ಮಾಣ ಬಳಕೆಗೆ ಪಡೆಯುತ್ತಿರುವುದು ನಮ್ಮ ಒಪ್ಪಿಗೆ ಇಲ್ಲ ಎಂದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ನೌಕರರು ನೀಡಿದ ಸಮ್ಮೇಳನಕ್ಕೆ ಬಳಕೆಯಾಗಬೇಕು.ಕಟ್ಟಡ ನಿರ್ಮಾಣಕ್ಕಾಗಿ ಅಲ್ಲ. ಕಟ್ಟಡ ನಿರ್ಮಾಣಕ್ಕೆ ಬೇರೆ ಹಣ ಬಳಸುವುದು ಸೂಕ್ತ ಎಂದು ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಭಿಪ್ರಾಯಪಟ್ಟಿದೆ.

ಜಿಲ್ಲಾ ಘಟಕದ ಪದಾಧಿಕಾರಿಗಳಾದ ಅಶೋಕ್ ಎಂ.ಸಜ್ಜನ್, ಮಲ್ಲಿಕಾರ್ಜುನ್ ಸಿ.ಉಪ್ಪಿನ್, ಡಿ.ಟಿ.ಬಂಡಿವಡ್ಡರ್, ಆರ್.ಕೆ.ಶರಣಗೌಡ, ಎಲ್.ಐ.ಲಕ್ಷ್ಮಣ್ಣನವರ್ ಮುಂತಾದವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ