ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ 1.78 ಲಕ್ಷ ಕೋಟಿ ರೂ. ಮೌಲ್ಯದ 111 ಸೇನಾ ಯೋಜನೆಗಳಿಗೆ ರಕ್ಷಣಾ ಇಲಾಖೆ ಸಮ್ಮತಿ

ನವದೆಹಲಿ, ಜ.1-ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ರಕ್ಷಣಾ ಇಲಾಖೆ ಮಿಲಿಟರಿ ಹಾರ್ಡ್‍ವೇರ್ ಗಳನ್ನು ಉತ್ಪಾದಿಸಲು ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಸಚಿವಾಲಯ 1.78 ಲಕ್ಷ ಕೋಟಿ ರೂ. ಮೌಲ್ಯದ 111 ಸೇನಾ ಯೋಜನೆಗಳಿಗೆ ಸಮ್ಮತಿ ನೀಡಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಲೋಕಸಭೆಗೆ ಈ ಮಾಹಿತಿ ನೀಡಿದ್ದು, 2015-16 ರಿಂದ 2017-18ರ ವಿತ್ತೀಯ ವರ್ಷದಲ್ಲಿ ಕೇಂದ್ರ ಸರ್ಕಾರವು 1,78,900 ಕೋಟಿ ರೂ.ಗಳ ಮೌಲ್ಯದ 111 ಯೋಜನೆಗಳಿಗೆ ಅಗತ್ಯ ಸಮ್ಮತಿ (ಅಕ್ಸೆಪ್ಟೆನ್ಸ್ ಆಫ್ ನೆಸೆಸ್ಸಿಟಿ(ಎಓಎನ್)ಗೆ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು.

ಅಲ್ಲದೇ ರಕ್ಷಣಾ ಸಾಧನಗಳನ್ನು ಹೊಂದಲು ಭಾರತದ ವಿವಿಧ ಕಂಪನಿಗಳೊಂದಿಗೆ ಸರ್ಕಾರವು 65,471.28 ಕೋಟಿ ರೂ. ಮೌಲ್ಯದ 99 ಕರಾರು ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಹೇಳಿದ್ದಾರೆ.

ಹೆಲಿಕಾಪ್ಟರ್‍ಗಳು ಯುದ್ದ ವಿಮಾನಗಳು ಹಾಗೂ ಜಲಾಂತರ್ಗಾಮಿಗಳ ನಿರ್ಮಾಣದಂಥ ಅನೇಕ ಯೋಜನೆಗಳನ್ನು ಮುಂಬರುವ ವರ್ಷಗಳಲ್ಲಿ ಈ ಯೋಜನೆಯಡಿ ತಯಾರಿಸುವ ಗುರಿ ಹೊಂದಲಾಗಿದೆ.ಭಾರತೀಯ ವಾಯುಪಡೆ(ಐಎಎಫ್)ಗೆ ಈವರೆಗೆ 10 ಹಗುರ ಯುದ್ಧ ವಿಮಾನಗಳನ್ನು ಎಚ್‍ಎಎಲ್‍ಗೆ ವಿತರಿಸಲಾಗಿದೆ. ಇವುಗಳು ಐಎಎಫ್‍ನ 45 ಸ್ಕ್ವಾಡ್ರನ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಉಳಿದ 6 ಫೈಟರ್ ಜೆಟ್‍ಗಳನ್ನು 2019ರ ಮಾರ್ಚ್ ವೇಳೆಗೆ ಪೂರೈಸಲಾಗುವುದು ಎಂದು ಭಾಮ್ರೆ ತಿಳಿಸಿದರು.
ವಾಯುಪಡೆಯ 15 ಸ್ಕ್ವಾಡ್ರನ್‍ಗಳಿಗೆ ನಾಲ್ಕು ತರಬೇತಿ ವಿಮಾನಗಳನ್ನು ಪೂರೈಸಲಾಗಿದೆ ಎಂದು ಸಚಿವರ ತಿಳಿಸಿದ್ದಾರೆ.

Defence Ministry cleared 111 military projects worth Rs 1.78 lakh crore under Make in India

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ