ಯಾವುದೇ ಅಹಿತಕರ ಘಟನೆ ನಡೆಯದೇ ಹೊಸವರ್ಷಾ ಆಚರಣೆ

ಬೆಂಗಳೂರು, ಜ.1- ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕುಡಿದು ತೂರಾಡುವವರನ್ನು ಎಲ್ಲೆಂದರಲ್ಲಿ ಬಾಟಲ್, ಕಸ ಎಸೆಯುವವರ ಮೇಲೆ ನಿಗಾ ವಹಿಸಲು ಬಿಬಿಎಂಪಿ ನೇಮಿಸಿದ್ದ 40 ಮಾರ್ಷಲ್‍ಗಳ ನೇಮಕ ಸಾರ್ಥಕವಾಗಿದೆ.

ಕುಡಿದು ಅಸಭ್ಯವಾಗಿ ವರ್ತಿಸುವವರನ್ನು ಹಿಡಿದು ಪೊಲೀಸರ ಸಹಕಾರದೊಂದಿಗೆ ಸಮುದಾಯ ಭವನಗಳಲ್ಲಿ ಕೂಡಿ ಹಾಕಲು ಎಲ್ಲೆಂದರಲ್ಲಿ ಬಾಟಲ್, ಕಸ ಎಸೆಯುವವರಿಗೆ ದಂಡ ಹಾಕಲೆಂದು ಬಿಬಿಎಂಪಿ ಆಯಕಟ್ಟಿನ ಜಾಗಗಳಲ್ಲಿ 40 ಮಾರ್ಷಲ್‍ಗಳನ್ನು ನೇಮಕ ಮಾಡಿತ್ತು. ಇವರು ಎಲ್ಲರ ಮೇಲೆ ತೀವ್ರ ನಿಗಾ ವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದರು.

ನಿನ್ನೆ ತಡರಾತ್ರಿವರೆಗೆ ಹೊಸ ವರ್ಷಾಚರಣೆ ಸಂಭ್ರಮ-ಸಡಗರ, ಕುಣಿತ, ಕೂಗಾಟ ನಡೆದರೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಮಾರ್ಷಲ್‍ಗಳ ಕಣ್ಗಾವಲು ತೀವ್ರವಾಗಿತ್ತು. ದಂಡ ಪ್ರಮಾಣದಲ್ಲಿ ಸಂಗ್ರಹವಾದ ಹಣ ಕೇವಲ 1 ಸಾವಿರದಷ್ಟು ಮಾತ್ರ. ಅಂದರೆ, ಜನ ಜಾಗೃತರಾಗಿದ್ದರು. ಹೆಚ್ಚು-ಕಡಿಮೆಯಾಗಿ ವರ್ತಿಸಿದರೆ ಮಾರ್ಷಲ್‍ಗಳು ಕ್ರಮ ಕೈಗೊಳ್ಳುತ್ತಾರೆ ಎಂಬ ಭಯವೂ ಕೂಡ ಕಾಡುತ್ತಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ