ವರ್ಷದ ಕೊನೆ ದಿನ ಕನಿಷ್ಠ ಮಟ್ಟಕ್ಕೆ ಇಳಿದ ಪೆಟ್ರೋಲ್​, ಡೀಸೆಲ್​ ದರ

ನವದೆಹಲಿ: 2018ನೇ ಸಾಲಿನ ಕೊನೆ ದಿನ ಪೆಟ್ರೋಲ್​ ಮತ್ತು ಡೀಸೆಲ್​ ದರ 42 ಪೈಸೆಯಷ್ಟು ಕಡಿಮೆಯಾಗಿದ್ದು, ವರ್ಷದ ಕನಿಷ್ಠ ದರಕ್ಕೆ ಇಳಿದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ 68.84 ಹಾಗೂ ಲೀಟರ್​ ಡೀಸೆಲ್​ಗೆ 46 ಪೈಸೆ ಇಳಿಕೆಯಾಗಿ 62.86 ರೂ.ಗೆ ತಲುಪಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ಗೆ 74.47 ಹಾಗೂ ಡೀಸೆಲ್​ಗೆ 65.76 ರೂ.ಗೆ ಇಳಿಕೆಯಾಗಿದೆ.

ಅಕ್ಟೋಬರ್​ನಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ಇದು ದೇಶಾದ್ಯಂತ ದೊಡ್ಡ ಕೋಲಾಹಲಕ್ಕೂ ಕಾರಣವಾಗಿತ್ತು. ಇರಾನ್​ ಮೇಲೆ ಹೇರಿದ್ದ ನಿಷೇಧವನ್ನ ತಾತ್ಕಾಲಿಕವಾಗಿ ಸಡಿಲಿಕೆ ಮಾಡಿದ್ದರಿಂದ ಇಂಧನ ಬೆಲೆ ಹತೋಟಿಗೆ ಬರಲು ಸಾಧ್ಯವಾಗಿದೆ.

ದೆಹಲಿಯಲ್ಲಿ ಗರಿಷ್ಠ 84ಕ್ಕೆ ತಲುಪಿದರೆ, ವಾಣಿಜ್ಯ ನಗರಿಯಲ್ಲಿ ಗರಿಷ್ಠ 91.34 ರೂ.ಗೆ  ಏರಿಕೆಯಾಗಿತ್ತು.   ಇದೀಗ ಆ ದರ ದೆಹಲಿಯಲ್ಲಿ ಕನಿಷ್ಠ 68.84ಕ್ಕೆ ತಲುಪಿದರೆ, ಮುಂಬೈನಲ್ಲಿ 74.47ಕ್ಕೆ ಕುಸಿದಿದೆ.  ಇದು ಗ್ರಾಹಕರಿಗೆ ರಿಲೀಫ್​ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ