ನವದೆಹಲಿ: 2018ನೇ ಸಾಲಿನ ಕೊನೆ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ 42 ಪೈಸೆಯಷ್ಟು ಕಡಿಮೆಯಾಗಿದ್ದು, ವರ್ಷದ ಕನಿಷ್ಠ ದರಕ್ಕೆ ಇಳಿದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ 68.84 ಹಾಗೂ ಲೀಟರ್ ಡೀಸೆಲ್ಗೆ 46 ಪೈಸೆ ಇಳಿಕೆಯಾಗಿ 62.86 ರೂ.ಗೆ ತಲುಪಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 74.47 ಹಾಗೂ ಡೀಸೆಲ್ಗೆ 65.76 ರೂ.ಗೆ ಇಳಿಕೆಯಾಗಿದೆ.
ಅಕ್ಟೋಬರ್ನಲ್ಲಿ ಇಂಧನ ಬೆಲೆ ಗಗನಕ್ಕೇರಿತ್ತು. ಇದು ದೇಶಾದ್ಯಂತ ದೊಡ್ಡ ಕೋಲಾಹಲಕ್ಕೂ ಕಾರಣವಾಗಿತ್ತು. ಇರಾನ್ ಮೇಲೆ ಹೇರಿದ್ದ ನಿಷೇಧವನ್ನ ತಾತ್ಕಾಲಿಕವಾಗಿ ಸಡಿಲಿಕೆ ಮಾಡಿದ್ದರಿಂದ ಇಂಧನ ಬೆಲೆ ಹತೋಟಿಗೆ ಬರಲು ಸಾಧ್ಯವಾಗಿದೆ.
ದೆಹಲಿಯಲ್ಲಿ ಗರಿಷ್ಠ 84ಕ್ಕೆ ತಲುಪಿದರೆ, ವಾಣಿಜ್ಯ ನಗರಿಯಲ್ಲಿ ಗರಿಷ್ಠ 91.34 ರೂ.ಗೆ ಏರಿಕೆಯಾಗಿತ್ತು. ಇದೀಗ ಆ ದರ ದೆಹಲಿಯಲ್ಲಿ ಕನಿಷ್ಠ 68.84ಕ್ಕೆ ತಲುಪಿದರೆ, ಮುಂಬೈನಲ್ಲಿ 74.47ಕ್ಕೆ ಕುಸಿದಿದೆ. ಇದು ಗ್ರಾಹಕರಿಗೆ ರಿಲೀಫ್ ನೀಡಿದೆ.