ಬೆಂಗಳೂರು, ಡಿ.31-ಗೃಹ ಸಾಲಗಳಿಗಾಗಿ ಭಾರತದ ಅತಿದೊಡ್ಡ ಆನ್ಲೈನ್ ಮಾರುಕಟ್ಟೆಯಾದ ಪೈಸಾ ಬಜಾರ್.ಕಾಂ ನೊಂದಿಗೆ ಕರ್ಣಾಟಕ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.
ಈ ಪಾಲುದಾರಿಕೆ ಮೂಲಕ ಬಳಕೆದಾರರು ಈಗ ನೇರವಾಗಿ ಕರ್ಣಾಟಕ ಬ್ಯಾಂಕ್ನ ಗೃಹ ಸಾಲ ಆಯ್ಕೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಸಾಧ್ಯವಿದೆ.
ತಮ್ಮ ಸಾಲಗಳ ಅಗತ್ಯಗಳಿಗೆ ಡಿಜಿಟಲ್ ಚಾನೆಲ್ಗಳನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗೃಹ ಸಾಲದ ಉಪಯೋಗ ನೀಡಲು ಪಾಲುದಾರಿಕೆ ಮಾಡಿಕೊಂಡಿರುವ ಬ್ಯಾಂಕ್ ಸ್ವಂತ ಮನೆ ಖರೀದಿಸುವ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಪ್ರಕ್ರಿಯೆಗಳ ಮೂಲಕ ಸಾಲ ನೀಡುವ ಗುರಿ ಹೊಂದಿದೆ ಎಂದು ಕರ್ಣಾಟಕ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್.ತಿಳಿಸಿದ್ದಾರೆ.
ಗ್ರಾಹಕರ ವಿವಿಧ ಉತ್ಪನ್ನಗಳಿಗೆ ಗರಿಷ್ಠ ಆಯ್ಕೆ ಒದಗಿಸಿ ಗೃಹ ಸಾಲಗಳಂತಹ ದೀರ್ಘಾವಧಿಯ ಬದ್ಧತೆಗಳನ್ನು ಹೊಂದಿರುವ ಉತ್ಪನ್ನಗಳಿಗೆ ನೆರವು ನೀಡುವುದು ನಮ್ಮ ಗುರಿ.ಅದಕ್ಕಾಗಿ ಈ ಒಪ್ಪಂದ ಸೂಕ್ತವಾಗಿದೆ ಎಂದು ಪೈಸಾ ಬಜಾರ್ನ ಸಿಇಒ ನವೀನ್ ಕುಕ್ರೆಜಾ ಅಭಿಪ್ರಾಯಪಟ್ಟಿದ್ದಾರೆ.