ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಮಿತ್ರಪಕ್ಷಗಳ ಒಕ್ಕೂಟ ಭರ್ಜರಿ ಗೆಲವು ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಸತತ ಮೂರನೇ ಬಾರಿಗೆ ಪ್ರತಿಪಕ್ಷಗಳನ್ನ ಮಣಿಸಿ ಅವಾಮಿ ಲೀಗ್ ಬಾಂಗ್ಲಾದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಸೋಮವಾರ ಅಲ್ಲಿನ ಚುನಾವಣಾ ಆಯೋಗ ಹೇಳಿದೆ.
300 ಸದಸ್ಯಬಲದ ಸಂಸತ್ನಲ್ಲಿ ಪ್ರಕಟಿತ 298 ಕ್ಷೇತ್ರಗಳಲ್ಲಿ ಅವಾಮಿ ಲೀಗ್ ಹಾಗೂ ಅದರ ಮಿತ್ರಪಕ್ಷಗಳು 287 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬಿರುಗಾಳಿ ದಿಗ್ವಿಜಯ ಸಾಧಿಸಿದೆ. ಪ್ರಮುಖ ಪ್ರತಿಪಕ್ಷವಾಗಿದ್ದ ಬಾಂಗ್ಲಾದೇಶ ನಾಷನಾಲಿಸ್ಟ್ ಪಾರ್ಟಿ (ಬಿಎನ್ಪಿ) ಕೇವಲ 6 ಸೀಟುಗಳನ್ನ ಮಾತ್ರ ಗೆಲ್ಲಲು ಸಾಧ್ಯವಾಗಿದೆ.