ಮುಂಬೈ: 2023ರ ವಿಶ್ವಕಪ್ ಮತ್ತು 2021ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಕುರಿತು ಬಿಸಿಸಿಐ, ಐಸಿಸಿಗೆ ಎಚ್ಚರಿಕೆ ನೀಡಿದೆ.
2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಕೇಂದ್ರ ಸರ್ಕಾರ ಐಸಿಸಿಗೆ ತೆರಿಗೆ ವಿನಾಯಿತಿ ನೀಡಿರಲಿಲ್ಲ. 23 ದಶಲಕ್ಷ ಡಾಲರ್ ಹಣವನ್ನ ಐಸಿಸಿ ತೆರಿಗೆ ಹಣವನ್ನ ಕಟ್ಟಿತ್ತು.
ಈ ವಿಚಾರ ಸಂಬಂಧ ಕೆಲವು ದಿನಗಳ ಹಿಂದೆ ಐಸಿಸಿ, ಬಿಸಿಸಿಐಗೆ ಪತ್ರ ಬರೆದು ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ಮಾಡದಿದ್ದರೆ ನಿಮ್ಮ ಆದಾಯದಲ್ಲಿ ಕಡಿತಗೊಳಿಸುತ್ತೇವೆ. ಡಿಸೆಂಬರ್ 31ರೊಳಗೆ ಇದಕ್ಕೆ ಉತ್ತರಿಸಬೇಕು ಇಲ್ಲದಿದ್ದಲ್ಲಿ 2023 ವಿಶ್ವಕಪ್ ಆತಿಥ್ಯವನ್ನ ನೀಡುವುದಿಲ್ಲ ಎಂದು ಬೆದರಿಕೆವೊಡ್ಡಿತ್ತು.
ಐಸಿಸಿ ಪತ್ರಕ್ಕೆ ಇದೀಗ ಪ್ರತಿಕ್ರಿಯಿಸಿರುವ ಬಿಸಿಸಿಐ, ತೆರಿಗೆ ವಿನಾಯಿತಿ ಬಿಸಿಸಿಐ ಜವಾಬ್ದರಿ ಅಲ್ಲ. ಇದು ಪ್ರಸಾರ ಮಾಡುವ ಚಾನಲ್ ಮತ್ತು ಐಸಿಸಿ ನಡುವಿನ ವಿಷಯವಾಗಿದೆ ಎಂದು ಪತ್ರಕ್ಕೆ ಉತ್ತರ ನೀಡಿದೆ.
ಕೇಂದ್ರ ಸರ್ಕಾರಕ್ಕೆ ತೆರಿಗೆ ವಿನಾಯಿತಿ ಕಟ್ಟುವ ವಿಚಾರ ಕುರಿತು ನಾವು ಯಾವತ್ತು ಐಸಿಸಿಗೆ ಭರವಸೆ ನೀಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಐಸಿಸಿ ವಿರುದ್ಧ ಕಾನೂನು ಸಮರಕ್ಕೂ ಸಜ್ಜಾಗಿದ್ದೇವೆ ಎಂದು ಬಿಸಿಸಿಐ ಐಸಿಸಿ ತಿರುಗೇಟು ನೀಡಿದೆ.