
ಮೆಲ್ಬೋರ್ನ್: ವರುಣನ ಅಡ್ಡಿ ನಡುವೆಯೂ ನಿರೀಕ್ಷೆಯಂತೆ ಆತಿಥೇಯ ಅಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಮೆಲ್ಬೋರ್ನ್ ಅಂಗಳದಲ್ಲಿ ಮಹಾ ಗೆಲುವು ಕಂಡಿದೆ. 37 ವರ್ಷಗಳ ಬಳಿಕ ಮೆಲ್ಬೋರ್ನ್ ಅಂಗಳದಲ್ಲಿ ಐತಿಹಾಸಿಕ ಗೆಲುವು ಕಂಡಿದೆ.
ಐದನೇ ಮತ್ತು ಅಂತಿಮ ದಿನದ ಕದಾಟದಲ್ಲಿ ಟೀಂ ಇಂಡಿಯಾಕ್ಕೆ ಗೆಲ್ಲಲು 2 ವಿಕೆಟ್ ಬೇಕಿತ್ತು. ಆದರೆ ಕೊಹ್ಲಿಯ ಪಡೆ ಗೆಲುವಿಗೆ ದಿನದಾಟದ ಅರಂಭದಲ್ಲಿ ಮಳೆ ಅಡ್ಡಿಯಾಯಿತು.ಇದರಿಂದ ಕೊಹ್ಲಿ ಪಡೆಗೆ ಆರಂಭದಲ್ಲಿ ಹಿನ್ನಡೆಯಾಯಿತು. ಪಂದ್ಯ ಡ್ರಾ ಆಗುತ್ತಾ ಎಂಬ ಆತಂಕವಿತ್ತು. ಆದರೆ ಮಳೆ ಕೆಲ ಹೊತ್ತಿನಲ್ಲೆ ನಿಂತು ಟೀಂ ಇಂಡಿಯಾ ಗೆಲುವಿಗೆ ದಾರಿ ಮಾಡಿಕೊಟ್ಟಿತ್ತು.
61 ರನ್‍ಗಳಿಸಿದ್ದ ಆಲ್‍ರೌಂಡರ್ ಪ್ಯಾಟ್ ಕಮಿನ್ಸ್ 63 ರನ್‍ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಸ್ಲಿಪ್‍ನಲ್ಲಿದ್ದ ಚೇತೇಶ್ವರ ಪುಜಾರಾಗೆ ಕ್ಯಾಚ್ ನೀಡಿ ಹೊರ ನಡೆದ್ರು.
ನಂತರ ಲಿಯಾನ್‍ಗೆ ಮೊಹ್ಮದ್ ಶಮಿ ಪೆವಿಲಿಯನ್ ದಾರಿ ತೋರಿಸಿ 137 ರನ್‍ಗಳ ಗೆಲುವಿನ ಸಂಭ್ರಮ ಆಚರಿಸಿದ್ರು. ನಾಲ್ಕನೆ ದಿನದಾಟದ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 258 ರನ್‍ಗಳಿಸಿತ್ತು. ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‍ನಲ್ಲಿ 106 ರನ್‍ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಸಂಕ್ಷಿಪ್ತ ಸ್ಕೋರ್
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 443.7 ಡಿಕ್ಲೇರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 151 ಆಲೌಟ್
ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ 106/8 ಡಿಕ್ಲೇರ್
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 261 ಆಲೌಟ್