ದುಂದುವೆಚ್ಚ; ವಿಧಾನಸಭಾ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿ ಅಮಾನತು

ಬೆಂಗಳೂರು2016-17ನೇ ಸಾಲಿನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

2016ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಒಟ್ಟು 20 ಕೋಟಿ ರೂಪಾಯಿ, 2017ನೇ ಸಾಲಿನಲ್ಲಿ 21.57 ಖರ್ಚು ಮಾಡಲಾಗಿದೆ. ಆದರೆ 8.60 ಲಕ್ಷ ರೂ. ಹಣವನ್ನು ಟೆಂಡರ್ ಕರೆಯದೇ ಖರ್ಚು ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ಮಂಡಳಿ ನಡೆಸಿದ್ದ ಆದೇಶದ ಅನುಸಾರ ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.

ಇದೊಂದು ಜಾತಿ ದ್ವೇಷದ ಕುತಂತ್ರ: ಎಸ್.ಮೂರ್ತಿ

ಟೆಂಡರ್ ಇಲ್ಲದೇ ಖರೀದಿಸಿದ್ದೇನೆ ಎಂದು ಆರೋಪಿಸಿ ನನ್ನ ವಿಧಾನಸಭಾ ಕಾರ್ಯದರ್ಶಿ ಹುದ್ದೆಯಿಂದ ಅಮಾನತು ಮಾಡಿರುವುದುರ ಹಿಂದೆ ಜಾತಿ ದ್ವೇಷದ ಕುತಂತ್ರವಿದೆ ಎಂದು ಎಸ್.ಮೂರ್ತಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಸಿಎಜಿ ವರದಿಯಲ್ಲಿ ನನ್ನ ಬಗ್ಗೆ ಯಾವುದೇ ಆರೋಪವಿಲ್ಲ. ನನಗೆ ಇನ್ನೂ ಹತ್ತು ವರ್ಷಗಳ ಸೇವಾವಧಿ ಇದೆ. ನನ್ನ ಕುರ್ಚಿಯಿಂದ ಇಳಿಸಲು ಈ ಸಂಚು ಹೂಡಲಾಗಿದೆ. ಇದನ್ನು ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ