ಕಪ್ಪು ವಜ್ರದ ಗಣಿಯಲ್ಲಿ 15 ಕಾರ್ಮಿಕರು ಸಿಲುಕಿ 18 ದಿನಗಳಲ್ಲಿ ಸಿಕ್ಕಿದ್ದು 3 ಹೆಲ್ಮೆಟ್​ ಮಾತ್ರ…

ಗುವಾಹಟಿ: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ15 ಕಾರ್ಮಿಕರು ಸಿಲುಕಿ 18 ದಿನಗಳು ಕಳೆದು ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸುತ್ತಿದ್ದು, ಕಾರ್ಯಾಚರಣೆ ನಿರತರಿಗೆ ಕಾರ್ಮಿಕರದ್ದು ಎನ್ನಲಾದ 3 ಹೆಲ್ಮೆಟ್ ಮಾತ್ರ ಸಿಕ್ಕಿವೆ.

ಪೂರ್ವ ಜೈಂಟಿಯಾ ಹಿಲ್ಸ್​ ಜಿಲ್ಲೆಯ ಲುಂಥಾರಿ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಡಿಸೆಂಬರ್ 13ರಂದು ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 100 ತಜ್ಞರು ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ವಾಯುಪಡೆ ಸಹ ನಿನ್ನೆ ಹೆಲಿಕಾಪ್ಟರ್ ಒಂದನ್ನು ಕಳುಹಿಸಿತ್ತು.

ಲಿಟೀನ್​ ನದಿ ನೀರು ಗಣಿ ಒಳಗೆ ನುಗ್ಗಿದ್ದರಿಂದ ಕಾರ್ಮಿಕರಿಗೆ ಹೊರ ಬರಲು ಸಾಧ್ಯವಾಗಿಲ್ಲ. ಅವರನ್ನು ಜೀವಸಹಿತ ಉಳಿಸಿಕೊಂಡು ನೀರನ್ನು ಹೊರ ಹಾಕಲು ಬಲಿಷ್ಠ ಸಾಮರ್ಥ್ಯದ ಪಂಪ್​ಸೆಟ್​ಗಳ ಬಳಸಲಾಗುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ