ಗುವಾಹಟಿ: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ15 ಕಾರ್ಮಿಕರು ಸಿಲುಕಿ 18 ದಿನಗಳು ಕಳೆದು ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸುತ್ತಿದ್ದು, ಕಾರ್ಯಾಚರಣೆ ನಿರತರಿಗೆ ಕಾರ್ಮಿಕರದ್ದು ಎನ್ನಲಾದ 3 ಹೆಲ್ಮೆಟ್ ಮಾತ್ರ ಸಿಕ್ಕಿವೆ.
ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಲುಂಥಾರಿ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಡಿಸೆಂಬರ್ 13ರಂದು ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 100 ತಜ್ಞರು ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ವಾಯುಪಡೆ ಸಹ ನಿನ್ನೆ ಹೆಲಿಕಾಪ್ಟರ್ ಒಂದನ್ನು ಕಳುಹಿಸಿತ್ತು.
ಲಿಟೀನ್ ನದಿ ನೀರು ಗಣಿ ಒಳಗೆ ನುಗ್ಗಿದ್ದರಿಂದ ಕಾರ್ಮಿಕರಿಗೆ ಹೊರ ಬರಲು ಸಾಧ್ಯವಾಗಿಲ್ಲ. ಅವರನ್ನು ಜೀವಸಹಿತ ಉಳಿಸಿಕೊಂಡು ನೀರನ್ನು ಹೊರ ಹಾಕಲು ಬಲಿಷ್ಠ ಸಾಮರ್ಥ್ಯದ ಪಂಪ್ಸೆಟ್ಗಳ ಬಳಸಲಾಗುತ್ತಿದೆ