ಬೆಂಗಳೂರು, ಡಿ.29- ಸಾವಿತ್ರಿ ಬಾಯಿಫುಲೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜ.3ರಂದು ಗಾಂಧಿ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬೆಳ್ಳಂದೂರು ಮುನಿಯಲ್ಲಪ್ಪ ಮಾತನಾಡಿ, ಇಂಗ್ಲಿಷ್ ಕಲಿಕೆ ಅಂದು, ಇಂದು ಹಾಗೂ ನಮ್ಮೂರು ಸರ್ಕಾರಿ ಶಾಲೆಗಳ ಸ್ಥಿತಿ-ಗತಿ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ವಿಚಾರ ಸಂಕಿರಣವನ್ನು ಉದ್ಘಾಟಿಸುವರು, ಚಿಂತಕ ನಟರಾಜ್ ಹುಳಿಯಾರ್ ಮಾತನಾಡುವರು.ಪ್ರಸ್ತುತ ಭಾಷಾ ಮಾಧ್ಯಮದ ಬಗ್ಗೆ ವಾಗ್ವಾದದ ಕುರಿತು ಚರ್ಚಿಸಲಾಗುವುದು ಎಂದರು.
ಇಂಗ್ಲಿಷ್ ಶಿಕ್ಷಣದಿಂದ ಶೋಷಿತ ಸಮುದಾಯಗಳು ವಂಚನೆಗೆ ಒಳಗಾಗದಂತೆ ಎಚ್ಚರವಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಸಿದ್ದಾರ್ಥ, ಶ್ರೀನಿವಾಸ್, ನಿರ್ಮಲಾ, ಮಣಿಪಾಲ್ ರಾಜಪ್ಪ ಉಪಸ್ಥಿತರಿದ್ದರು.