
ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಬಂದರಿನಲ್ಲಿ ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಕ್ರೇನ್ ಕುಸಿದುಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಹತ್ತುಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತನನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರು ಗ್ರಾಮದ ವಿಟೈಪಲ್ಲಿ ಲಕ್ಷ್ಮಣ್ ಕುಮಾರ್ (35 ) ಎಂದು ಗುರುತಿಸಲಾಗಿದೆ.
ಕಾಕಿನಾಡ ಬಂದರಿನಲ್ಲಿ ಹಡಗುಗಳಿಂದ ಸರಕು ಮತ್ತು ಸಾಮಾಗ್ರಿಗಳನ್ನು ಇಳಿಸುವ , ತುಂಬುವ ಕೆಲಸದಲ್ಲಿ ಕೆಲಸಗಾರರು ನಿರತರಾಗಿದ್ದಾಗ ಇದಕ್ಕಾಗಿ ಬಳಸುತ್ತಿದ್ದ ಬೃಹತ್ ಗಾತ್ರದ ಕ್ರೇನ್ ಗಳು ಹಠಾತ್ತನೇ ಕುಸಿದಿವೆ. ಬೆಳಗ್ಗೆ 10-30ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಮತ್ತು ಸುರಕ್ಷತಾ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ.
Kakinada Seaport,Cranes collapse, killing one, 10 injured