ಬೆಂಗಳೂರು,ಡಿ.29- ಸ್ನೇಹಿತರ ಜೊತೆ ವಾಯು ವಿಹಾರಕ್ಕೆ ತೆರಳಿದ್ದ ವೃದ್ದೆಯ 41 ಗ್ರಾಂ ಸರವನ್ನು ಕಳ್ಳರು ಅಪಹರಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೇವರಾಜ ಅರಸು ಲೇಔಟ್‍ನ ನಾಗದೇವನಹಳ್ಳಿ ನಿವಾಸಿ ಚಂದ್ರಾ(72) ಎಂಬ ವೃದ್ದೆ ನಿನ್ನೆ ಸಂಜೆ 6.45ರಲ್ಲಿ ಸ್ನೇಹಿತರೊಂದಿಗೆ ವಾಯುವಿಹಾರ ಮಾಡುತ್ತಿದ್ದರು.
ಈ ವೇಳೆ ಚಂದ್ರಾ ಅವರ ಮುಂದೆ ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ಹೋಗುತ್ತಾ ಇವರ ಸರವನ್ನು ಎಗರಿಸಿದ್ದಾರೆ. ಆದರೆ ಇದು ಚಂದ್ರಾ ಅವರ ಗಮನಕ್ಕೆ ಬಂದಿಲ್ಲ. ಸ್ವಲ್ಪ ದೂರ ಹೋಗಿ ನೋಡಿಕೊಂಡಾಗಲೇ ಸರ ಅಪಹರಣವಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಜ್ಞಾನಭಾರತಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.